ADVERTISEMENT

ಬೆಳಗಾವಿಯಲ್ಲಿ ಮತ್ತೆ 13 ಮಂದಿಗೆ ಕೋವಿಡ್–19 ದೃಢ

ಮನೆಗೆ ಹೋಗಿದ್ದವರಿಗೆ ಕೊರೊನಾ ಪಾಸಿಟಿವ್!

​ಪ್ರಜಾವಾಣಿ ವಾರ್ತೆ
Published 31 ಮೇ 2020, 13:07 IST
Last Updated 31 ಮೇ 2020, 13:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    
""

ಬೆಳಗಾವಿ: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ಹೊಸದಾಗಿ 13 ಮಂದಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಇಲ್ಲಿನ ಸೋಂಕಿತರ ಸಂಖ್ಯೆ 153ಕ್ಕೆ ಏರಿಕೆಯಾಗಿದೆ.

ಇವರಲ್ಲಿ ಇಬ್ಬರು ದೆಹಲಿಯಿಂದ ವಾಪಸಾದವರು ಹಾಗೂ ಉಳಿದವರು ನೆರೆಯ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇವರ ಪೈಕಿ ಒಂದು ಹಾಗೂ ಮೂರು ವರ್ಷ ವಯಸ್ಸಿನ ಬಾಲಕರಿದ್ದಾರೆ. ಇವರೆಲ್ಲರನ್ನೂ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿತ್ತು. ಚಿಕಿತ್ಸೆಗಾಗಿ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

‘ಐವರು ಬೆಳಗಾವಿ ತಾಲ್ಲೂಕಿನವರ, ಐವರು ಚಿಕ್ಕೋಡಿ ತಾಲ್ಲೂಕಿನವರು ಹಾಗೂ ಮೂವರು ಹುಕ್ಕೇರಿ ತಾಲ್ಲೂಕಿನವರು’ ಎಂದು ತಿಳಿದುಬಂದಿದೆ.

ADVERTISEMENT

‘ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ, ಕ್ವಾರಂಟೈನ್‌ ಕೇಂದ್ರದಲ್ಲಿ 7 ದಿನಗಳಿಂದ ಇದ್ದ ಕೆಲವರನ್ನು ಬಿಡುಗಡೆ ಮಾಡಲಾಗಿತ್ತು. ಅವರು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು. ಅವರಲ್ಲಿ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿದುಬಂದಿದೆ. ‘ತಾಲ್ಲೂಕಿನ ಅಗಸಗಿ ಗ್ರಾಮದ ಕ್ವಾರಂಟೈನ್‌ ಕೇಂದ್ರದಲ್ಲಿದ್ದವರನ್ನು ವರದಿ ಬರುವುದಕ್ಕೂ ಮುನ್ನವೇ ಮನೆಗೆ ಕಳುಹಿಸಲಾಗಿದೆ’ ಎಂದು ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.

‘ಈಗ ಸೋಂಕು ದೃಢಪಟ್ಟಿರುವವರು ಕುಟುಂಬದವರೊಂದಿಗೆ ಇತರರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯೂ ಇದೆ. ಇದರಿಂದ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರಿಗೆ ಆತಂಕ ಉಂಟಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿಯೂ ಎದುರಾಗಿದೆ. ಮಹಾರಾಷ್ಟ್ರದಿಂದ ವಾಪಸಾದವರಲ್ಲಿ ಇಬ್ಬರು ತಾಲ್ಲೂಕಿನ ಅಸಗಿಯವರು, ಒಬ್ಬರು ಮಾಳ್ಯಾನಟ್ಟಿಯವರು’ ಎಂದು ತಿಳಿದುಬಂದಿದೆ.

ಹೆಚ್ಚಿನ ಮಾಹಿತಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.