ADVERTISEMENT

ಬೆಳಗಾವಿ | ತೋಟಗಾರಿಕೆ ಇಲಾಖೆಯಿಂದ ವ್ಯವಸ್ಥೆ: ಆನ್‌ಲೈನ್‌ಲ್ಲಿ ಸಸಿ ಮಾರಾಟ

​ಪ್ರಜಾವಾಣಿ ವಾರ್ತೆ
Published 27 ಮೇ 2020, 13:47 IST
Last Updated 27 ಮೇ 2020, 13:47 IST

ಬೆಳಗಾವಿ: ‘ಜೂನ್‌ನಲ್ಲಿ ಮುಂಗಾರು ಮಳೆ ಪ್ರಾರಂಭವಾಗುವ ಸಾಧ್ಯತೆ ಇದೆ. ಆದರೆ, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಇಲಾಖೆ ಮುಂದಾಗಿದ್ದು, ಆನ್‌ಲೈನ್‌ನಲ್ಲಿ ಕಸಿ ಅಥವಾ ಸಸಿಗಳನ್ನು ಮಾರಲಾಗುವುದು’ ಎಂದು ಉಪನಿರ್ದೇಶಕ ರವೀಂದ್ರ ಹಕಾಟಿ ತಿಳಿಸಿದ್ದಾರೆ.

‘www.raithanamithrabelagavi.in ಜಾಲತಾಣದ ಮೂಲಕ ಕಾಯ್ದಿರಿಸಿದಲ್ಲಿ ಹಾಗೂ ಸಾಗಣೆ ವೆಚ್ಚ ಭರಿಸಿದಲ್ಲಿ ಅಥವಾ ರೈತರು ನೇರವಾಗಿ ತೋಟಗಾರಿಕೆ ಕ್ಷೇತ್ರದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಲ್ಲಿ ನೇರವಾಗಿ ರೈತರ ತೋಟಗಳಿಗೆ ತಲುಪಿಸುವ ಹೊಸ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಸಪೋಟ, ಮಾವು, ತೆಂಗು, ಪೇರಲ, ನೇರಳೆ, ಸೀತಾಫಲ ಮೊದಲಾದ ಸಸಿಗಳನ್ನು ಪೂರೈಸಲಾಗುತ್ತಿದೆ. 2.70 ಲಕ್ಷ ಸಸಿಗಳನ್ನು ಪೂರೈಸುವ ಉದ್ದೇಶವಿದೆ. ಇಲಾಖೆಯಿಂದ ಅಭಿವೃದ್ಧಿಪಡಿಸಿದ ಪ್ರಮಾಣೀಕೃತವಾದ ಗುಣಮಟ್ಟದ ಸಸಿಗಳನ್ನು ನೀಡಲಾಗುವುದು. ಲಾಕ್‌ಡೌನ್ ಸಂದರ್ಭದಲ್ಲಿ ತೋಟಗಾರಿಕೆ ಚಟುವಟಿಕೆ ನಡೆಸಲು ಸಸಿಗಳನ್ನು ಸಾಗಿಸಲು ಸಾಧ್ಯವಾಗದೆ ಇರುವವರಿಗೆ ನೆರವಾಗಲು ಉದ್ದೇಶಿಸಲಾಗಿದೆ. ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

‘ಕಾಯ್ದಿರಿಸಿದಲ್ಲಿ ರೈತರಿಗೆ ಅನುಕೂಲವಾಗುವ ದಿನಾಂಕ ಹಾಗೂ ವೇಳೆಯಲ್ಲಿ ತಲುಪಿಸಲಾಗುವುದು. ಸಾಗಣೆ ವೆಚ್ಚವು ಹೆಚ್ಚಾದರೆ ಮೂರ‍್ನಾಲ್ಕು ರೈತರು ಸೇರಿಕೊಂಡು ಭರಿಸಿದಲ್ಲಿ ಅನುಕೂಲವಾಗುತ್ತದೆ’ ಎಂದು ತಿಳಿಸಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9481175832 (ಹುಕ್ಕೇರಿ, ಮಂಜುನಾಥ ಕರೋಶಿ), ಮೊ: 9164878067 (ಗೋಕಾಕ, ಪ್ರಶಾಂತ ದೇವರಮನೆ), ಮೊ:̧9611129299 (ಖಾನಾಪುರ, ವಿಜಯಕುಮಾರ ಅಕ್ಕಿ), ಮೊ:̧7795141855 (ಸವದತ್ತಿ, ಪ್ರಕಾಶ ಬಿರಾದರ), ಮೊ: 9901772502 (ಕಿತ್ತೂರು, ಲಕ್ಷ್ಮಣ ಮಾದರ) ಹಾಗೂ ಮೊ:9538562190 (ಅಥಣಿ, ನೀಲವ್ವ) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಭ್ಯ ಸಸಿಗಳು
ಸಸಿ; ಲಭ್ಯ ತಳಿ; ಸಂಖ್ಯೆ; ದರ (₹ಗಳಲ್ಲಿ)
ಮಾವು; ಆಪೂಸ್, ಕೇಸರ; 63125; 32
ಸಪೋಟ; ಕ್ರಿಕೆಟ್‌ಬಾಲ್‌, ಕಾಲಿಪತ್ತಿ; 29904; 32
ನೇರಳೆ; ಧೂಪಧಾಳ; 20292; 30
ಪೇರಲ; ಎಲ್-49, ಲಲಿತ್; 13775; 35
ಸೀತಾಫಲ; ಬಾಲನಗರ; 6904; 28
ತೆಂಗು; ಅರಸೀಕೆರೆ; 13724; 60
ಲಿಂಬೆ; ಸ್ಥಳೀಯ; 32681; 12
ಕರಿಬೇವು; ಸ್ಥಳೀಯ; 24210; 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.