ADVERTISEMENT

ಬೆಂಗಳೂರು | ಡ್ರೈಫ್ರೂಟ್ಸ್ ಮಳಿಗೆ, ಆಹಾರ ಉತ್ಪಾದನಾ ಘಟಕಗಳ ಮೇಲೆ‌ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 6:19 IST
Last Updated 16 ನವೆಂಬರ್ 2023, 6:19 IST
   

ಬೆಂಗಳೂರು: ನಗರದಲ್ಲಿರುವ ಪ್ರಮುಖ ಡ್ರೈಫ್ರೂಟ್ಸ್ ಮಳಿಗೆಗಳು ಹಾಗೂ ಆಹಾರ‌ ಉತ್ಪಾದನಾ‌ ಘಟಕಗಳ‌ ಮೇಲೆ ಆದಾಯ ತೆರಿಗೆ ಇಲಾಖೆಯ (ಐಟಿ) ಅಧಿಕಾರಿಗಳು ದಾಳಿ‌ ಮಾಡಿದ್ದಾರೆ.

ಮಳಿಗೆ, ಘಟಕಗಳ ಜೊತೆಯಲ್ಲಿ ಅವುಗಳ ಮಾಲೀಕರ ಮನೆಯಲ್ಲೂ ಶೋಧ ನಡೆಸುತ್ತಿದ್ದಾರೆ.

ತೆರಿಗೆ ವಂಚನೆ ಬಗ್ಗೆ ಬಂದ ಮಾಹಿತಿ ಆಧರಿಸಿ ಗುರುವಾರ ಬೆಳಿಗ್ಗೆ ಪ್ರತ್ಯೇಕ ತಂಡಗಳ ಮೂಲಕ ಐಟಿ ಅಧಿಕಾರಿಗಳು ಈ ದಾಳಿ ಮಾಡಿದ್ದಾರೆ.

ADVERTISEMENT

ರಾಜಾಜಿನಗರ, ಚಿಕ್ಕಪೇಟೆ ಹಾಗೂ ಇತರೆ ಸ್ಥಳಗಳಲ್ಲಿರುವ ಮಳಿಗೆ, ಘಟಕ ಹಾಗೂ ಮಾಲೀಕರ ಮನೆಯಲ್ಲಿ ಶೋಧ ಮುಂದುವರಿಸಲಾಗಿದೆ. ರಾತ್ರಿಯವರೆಗೂ ಶೋಧ ನಡೆಯಲಿದೆ. ಆ ನಂತರವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.