ಬೆಂಗಳೂರು: ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದಎಂ.ಜಿ. ರಸ್ತೆ ನಿಲ್ದಾಣ ಹಾಗೂಬೈಯಪ್ಪನಹಳ್ಳಿ ನಿಲ್ದಾಣ ನಡುವೆ ಮೆಟ್ರೊ ರೈಲು ಸಂಚಾರ ಭಾನುವಾರ ವಿಳಂಬವಾಯಿತು.
ಬೆಳಿಗ್ಗೆ 7ಕ್ಕೆ ಸಂಚಾರ ಆರಂಭವಾಗಬೇಕಿದ್ದ ರೈಲು ಸಂಚಾರ 8.20ಕ್ಕೆ ಪುನರಾರಂಭವಾಯಿತು.ಟ್ರಿನಿಟಿ ವೃತ್ತ ಮತ್ತು ಹಲಸೂರು ನಿಲ್ದಾಣದ ನಡುವೆನಿಗಮವು ನಿರ್ವಹಣಾ ಕೆಲಸ ನಡೆಸುತ್ತಿರುವುದರಿಂದ ಮೆಟ್ರೊ ರೈಲು ಸಂಚಾರ ಆರಂಭವಾಗುವುದು ವಿಳಂಬವಾಗಿದೆ. ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್‌ನ ಬೇರಿಂಗ್ ಬದಲಿಸುವ ಕಾರ್ಯ ನಡೆಸಲಾಗಿದೆ.
ಮೈಸೂರು ರಸ್ತೆ ನಿಲ್ದಾಣದಿಂದ ಎಂ.ಜಿ. ರಸ್ತೆ ನಿಲ್ದಾಣದವರೆಗೆ ಎಂದಿನಂತೆ ಸಮಯಕ್ಕೆ ಸರಿಯಾಗಿ ಸಂಚಾರ ಆರಂಭಿಸಲಾಗಿದೆಎಂದು ನಿಗಮ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.