ADVERTISEMENT

ಇದೇ 17ಕ್ಕೆ ‘ಭೂಮಿಕಾ ಕ್ಲಬ್’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:01 IST
Last Updated 7 ಡಿಸೆಂಬರ್ 2022, 16:01 IST
.
.   

ಬೆಂಗಳೂರು:ಮಹಿಳೆಯರ ಜೀವನ ಶೈಲಿಯನ್ನು ಉತ್ಕೃಷ್ಟಗೊಳಿಸಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸ್ಥಾಪಿಸಿರುವ ‘ಭೂಮಿಕಾಕ್ಲಬ್’ ವೇದಿಕೆ, ಚಳಿಗಾಲದ ಪ್ರಯುಕ್ತ ಇದೇ 17ರಂದುಮಧ್ಯಾಹ್ನ 2.30ಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಹಯೋಗದಲ್ಲಿ ಇಂದಿರಾನಗರದಲ್ಲಿರುವ ಇಂದಿರಾನಗರ ಕ್ಲಬ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.‘ಶೀತಕಾಲದ ಉತ್ಸಾಹಕಾರಿ ಪ್ರವಾಸೋಪಾಯಗಳು’ ಶೀರ್ಷಿಕೆಯಡಿ ಸಂಗೀತ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗಾಯಕ ವಾಸು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಪ್ರವಾಸ ಯೋಜನೆಗಳ ಬಗ್ಗೆ ಪರ್ವತಾರೋಹಿ ವಸುಮತಿ, ಬೈಕರ್ ರಾಜಲಕ್ಷ್ಮೀ ಹಾಗೂಟ್ರಾವೆಲ್ ವ್ಲಾಗರ್ ಗ್ಲೊರಿಯಾ ಖಮ್ರುಯಿ ಸಂವಾದ ನಡೆಸಲಿದ್ದಾರೆ. ಚಳಿಗಾಲದಲ್ಲಿ ಸದೃಢವಾಗಿರುವುದು ಹಾಗೂ ಸೌಂದರ್ಯ ಕಾಪಾಡಿಕೊಳ್ಳುವ ಬಗ್ಗೆ ಖುಷ್ಬೂ ಶೆಟ್ಟಿ ಹಾಗೂ ರುಚಿಕಾ ಚೌಧರಿ ಸಲಹೆಗಳನ್ನು ನೀಡಲಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ಅಚ್ಚರಿ ಉಡುಗೊರೆ ಗೆಲ್ಲುವ ಅವಕಾಶವೂ ಇರಲಿದೆ. ಹೆಸರು ನೋಂದಾಯಿಸಿದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಎಂದು ಪ್ರಕಟಣೆ ತಿಳಿಸಿದೆ.

ನೋಂದಣಿಗೆ:bit.ly/pvbhumikaclub

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.