
ಪ್ರಜಾವಾಣಿ ವಾರ್ತೆರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕರ ಬೈರತಿ ಬಸವರಾಜ ಅವರನ್ನು ಸಿಐಡಿ ಪೊಲೀಸರು ಕೊನೆಗೂ ಬಂಧಿಸಿ, ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. 2025ರ ಜುಲೈ 15ರಂದು ರಾತ್ರಿ ಮನೆಯ ಎದುರು ಬಿಕ್ಲು ಶಿವು ನಿಂತಿದ್ದಾಗ ದುಷ್ಕರ್ಮಿಗಳ ತಂಡವು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಕೃತ್ಯ ನಡೆದು ಬರೋಬ್ಬರಿ ಎಂಟು ತಿಂಗಳ ಬಳಿಕ ಬೈರತಿ ಅವರ ಬಂಧನವಾಗಿದೆ. ಈ ಪ್ರಕರಣದಲ್ಲಿ ಬೈರತಿ ಅವರ ಪಾತ್ರವಾದರೂ ಏನು? ಸಿಐಡಿ ಹಾಗೂ ಭಾರತಿನಗರ ಠಾಣೆಯ ಪೊಲೀಸರಿಗೆ ಶಾಸಕರ ವಿರುದ್ಧ ಸಿಕ್ಕಿದ ಸಾಕ್ಷ್ಯಗಳಾದರೂ ಏನು? ಯಾವ ಕಾರಣದಿಂದ ಶಾಸಕರನ್ನು ಬಂಧಿಸಲಾಗಿದೆ ಎಂಬ ವಿವರ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.