ADVERTISEMENT

ಬಿಜೆಪಿಯಿಂದ ಆರ್ಥಿಕ ಜಿಹಾದ್‌: ಪ್ರಿಯಾಂಕ್ ಖರ್ಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 18:59 IST
Last Updated 30 ಮಾರ್ಚ್ 2022, 18:59 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಸಾಮಾನ್ಯ ಜನರ ಮೇಲೆ ಬಿಜೆಪಿ ಜಿಹಾದ್ ಮಾಡುತ್ತಿದೆ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಬಿಜೆಪಿಯವರ ಪ್ರಕಾರ ಜಿಹಾದ್ ಎಂದರೆ ಯುದ್ಧ, ಭಯೋತ್ಪಾದನೆ. ಬಿಜೆಪಿಯವರ ಆರ್ಥಿಕ ಜಿಹಾದ್ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲಿವಿದ್ಯಾರ್ಥಿಗಳು, ಪರಿಶಿಷ್ಟರು, ಹಿಂದುಳಿದ ವರ್ಗದವರು, ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರಿಗೆ ಮಾಡುತ್ತಿದೆ’ ಎಂದರು.

‘ಬಿಜೆಪಿ ನಾಯಕರು ಹಲಾಲ್ ಕಟ್ ಮಾಂಸ ಮಾರಾಟ ನಿರ್ಬಂಧದ ವಿಚಾರ ತಂದಿದ್ದಾರೆ. ಇದೆಲ್ಲದರ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರು ಬಜೆಟ್ ಕಟ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಪರಿಶಿಷ್ಟರು ಉದ್ಯಮಿಗಳು ಆಗಬಾರದೇ? ಇದು ಪರಿಶಿಷ್ಟರ ಮೇಲೆ ನಡೆಸುತ್ತಿರುವ ಆರ್ಥಿಕ ಜಿಹಾದ್ ಅಲ್ಲವೇ? ₹ 10 ಲಕ್ಷದ ನೆರವನ್ನು ಬಿಜೆಪಿ ಸರ್ಕಾರ ₹ 50 ಸಾವಿರಕ್ಕೆ ಇಳಿಸಿದೆ. ಸಲಹೆ ಕೊಟ್ಟಿದ್ದ ಕಾರಜೋಳ ಸಾಹೇಬರು ಈಗೇನು ಮಾಡುತ್ತಿದ್ದಾರೆ? ಬಿಜೆಪಿ ಬಂದ ನಂತರ ‌ಪರಿಶಿಷ್ಟರ ಅನುದಾನ ಕಡಿತ ಆಗಿದ್ದು ಯಾಕೆ’ ಎಂದೂ ಖರ್ಗೆ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.