ADVERTISEMENT

ಹುಬ್ಬಳ್ಳಿಯಲ್ಲಿ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭ

ಮುಖ್ಯಮಂತ್ರಿಯಿಂದ ಗೋಪೂಜೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 10:00 IST
Last Updated 28 ಡಿಸೆಂಬರ್ 2021, 10:00 IST
ಸಭೆಗೂ‌‌ ಮೊದಲು ಗೋ ಪೂಜೆ‌ ನೆರವೇರಿಸಿದ ಮುಖ್ಯಮಂತ್ರಿ
ಸಭೆಗೂ‌‌ ಮೊದಲು ಗೋ ಪೂಜೆ‌ ನೆರವೇರಿಸಿದ ಮುಖ್ಯಮಂತ್ರಿ   

ಹುಬ್ಬಳ್ಳಿ: ಹುಬ್ಬಳ್ಳಿಯ ಡೆನಿಸನ್ಸ್‌ ಹೋಟೆಲ್‌ನಲ್ಲಿಆಯೋಜನೆಯಾಗಿರುವ ಎರಡು ದಿನಗಳ ರಾಜ್ಯಬಿಜೆಪಿ ಕಾರ್ಯಕಾರಿಣಿ ಸಭೆ ಮಂಗಳವಾರ ಮಧ್ಯಾಹ್ನ ಆರಂಭವಾಯಿತು.

ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯಾಗಬೇಕಿದ್ದ ಸಮಾರಂಭ, ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಅವರು ಬರುವುದು ವಿಳಂಬವಾದ್ದರಿಂದ ಮಧ್ಯಾಹ್ನ ಉದ್ಘಾಟನೆಗೊಂಡಿತು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್‌. ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ. ರಾಷ್ಟ್ರೀಯ ಉಪಾಧ್ಯಕ್ಷೆ ಅರುಣಾ,ಸಚಿವರಾದ ಆರ್. ಅಶೋಕ್. ಎಸ್ ಟಿ ಸೋಮಶೇಖರ್, ಡಾ. ಸುಧಾಕರ, ಶಂಕರಪಾಟೀಲ ಮುನೇನಕೊಪ್ಪ,ಸಚಿವ ಶಿವರಾಮ ಹೆಬ್ಬಾರ, ಕೆ ಎಸ್ ಈಶ್ವರಪ್ಪ. ಎಂಟಿಬಿ ನಾಗರಾಜ, ಗೋವಿಂದ ಕಾರಜೋಳ, ಮಾಧುಸ್ವಾಮಿ. ಕೋಟಾ ಶ್ರೀನಿವಾಸ ಪೂಜಾರಿ,ಸುನೀಲಕುಮಾರ್, ಸಂಸದ ಸದಾನಂದಗೌಡ, ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ADVERTISEMENT

ಸಭೆಗೂ‌‌ ಮೊದಲು ಗೋ ಪೂಜೆ‌ ನೆರವೇರಿಸಿದ ಮುಖ್ಯಮಂತ್ರಿ

ಇಲ್ಲಿ ಆಯೋಜನೆಯಾಗಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಪ್ರಮುಖರು ಆಕಳಿಗೆ ಪೂಜೆ ಸಲ್ಲಿಸಿದರು.

ಆಕಳನ್ನು‌ ನೇವರಿಸಿ ನಮಸ್ಕರಿಸಿದರು. ಬಳಿಕ ಪಕ್ಷದ ಧ್ವಜಾರೋಹಣ ‌ಮಾಡಿದರು.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಘಟಕದ ಅಧ್ಯಕ್ಷ ನಳೀನ ಕುಮಾರ ಕಟೀಲ್, ಶಾಸಕರಾದ ಜಗದೀಶ ಶೆಟ್ಟರ್, ಸಿ.ಟಿ. ರವಿ, ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣನವರ, ಸಚಿವರಾದ ಆರ್.‌ಅಶೋಕ, ಶಂಕರಪಾಟೀಲ ಮುನೇನಕೊಪ್ಪ, ಮಾಧುಸ್ವಾಮಿ, ಬಿ.ಸಿ.‌ ನಾಗೇಶ ಸೇರಿದಂತೆ ಹಲವರು ‌ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.