ADVERTISEMENT

ಸತ್ತವರು ಮುಸ್ಲಿಮರಾದರೆ ಪರಿಹಾರಕ್ಕೆ ಅರ್ಹರಲ್ಲವೇ? - ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 20:30 IST
Last Updated 31 ಜುಲೈ 2022, 20:30 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ‘ಪ್ರವೀಣ್ ನೆಟ್ಟಾರು ಸಾವಿಗೆ ಸ್ಪಂದಿಸಿದ ಮಾದರಿಯಲ್ಲಿಯೇ ಮಸೂದ್ ಮತ್ತು ಫಾಝಿಲ್‌ ಸಾವಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಬೇಕಿತ್ತು’ ಎಂದು ಕಾಂಗ್ರೆಸ್‌ ಶಾಸಕ ದಿನೇಶ್ ಗುಂಡೂರಾವ್ಅಭಿಪ್ರಾಯಪಟ್ಟಿದ್ದಾರೆ.

ಟ್ವೀಟ್ ಮಾಡಿರುವ ಅವರು, ‘ಬಸವರಾಜ ಬೊಮ್ಮಾಯಿ ಅವರೇ ನೀವು, ಪ್ರವೀಣ್ ಸಾವಿಗೆ ಸ್ಪಂದಿಸಿದ್ದು ಅನುಕರಣೀಯ.‌ ಆದರೆ, ಹತರಾದ ಮಸೂದ್‌ ಹಾಗೂ ಫಾಝಿಲ್‌ಗೆ ನಿಮ್ಮಿಂದ ಕೊಂಚವಾದರೂ ಸಾಂತ್ವನ ಬೇಡವೇ? ಎಂದು ಪ್ರಶ್ನಿಸಿದ್ದಾರೆ.

‘ಪ್ರವೀಣ್ ಮನೆಗೆ ಹೋದಿರಿ, ₹ 25 ಲಕ್ಷ ಪರಿಹಾರ ಕೊಟ್ಟಿದ್ದೀರಿ. ಇಲ್ಲಿ ತಕರಾರಿಲ್ಲ. ಆದರೆ‌, ಮಸೂದ್, ಫಾಝಿಲ್ ಮಾಡಿದ ತಪ್ಪೇನು? ಸತ್ತವರು ಮುಸ್ಲಿಮರಾದರೆ ಪರಿಹಾರಕ್ಕೆ ಅರ್ಹರಲ್ಲವೇ?’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.