ADVERTISEMENT

ಪಕ್ಷದ ಶಿಸ್ತು ಉಲ್ಲಂಘನೆ ಆರೋಪ: ಹೆಬ್ಬಾರ್, ಸೋಮಶೇಖರ್‌ಗೆ ಕಾರಣ ಕೇಳಿ BJP ನೋಟಿಸ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 16:01 IST
Last Updated 25 ಮಾರ್ಚ್ 2025, 16:01 IST
<div class="paragraphs"><p>ಶಿವರಾಮ ಹೆಬ್ಬಾರ್ ಮತ್ತು ಎಸ್‌.ಟಿ. ಸೋಮಶೇಖರ್</p></div>

ಶಿವರಾಮ ಹೆಬ್ಬಾರ್ ಮತ್ತು ಎಸ್‌.ಟಿ. ಸೋಮಶೇಖರ್

   

ನವದೆಹಲಿ: ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷದ ಕೇಂದ್ರ ಶಿಸ್ತು ಸಮಿತಿಯು, ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರಿಗೆ ಕಾರಣ ಕೇಳಿ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ನೋಟಿಸ್ ಜಾರಿ ಮಾಡಿದ್ದು, ‘ಪಕ್ಷದ ನಿಯಮ ಉಲ್ಲಂಘಿಸಿರುವ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದನ್ನು ನೋಟಿಸ್ ತಲುಪಿದ 72 ಗಂಟೆಯೊಳಗೆ ಉತ್ತರಿಸಬೇಕು. ಕಾಲಮಿತಿಯೊಳಗೆ ಉತ್ತರಿಸದಿದ್ದಲ್ಲಿ, ಹೇಳಲು ಏನೂ ಇಲ್ಲವೆಂದು ಭಾವಿಸಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

ADVERTISEMENT

‘ರಾಜಕೀಯ ಪಕ್ಷದಲ್ಲಿ ಅಶಿಸ್ತಿಗೆ ಕಾಲಕಾಲಕ್ಕೆ ಔಷಧಿ ನೀಡಬೇಕು. ಆದರೆ, ಈಗ ಬಿಜೆಪಿಯಲ್ಲಿ ಔಷಧಿ ನೀಡುವ ಸಮಯ ಮೀರಿದೆ. ಇಡೀ ಪಕ್ಷ ಅಶಿಸ್ತಿನಿಂದ ಕೂಡಿದೆ. ಈಗ ಬಿಜೆಪಿಯಲ್ಲಿ ನಾಯಕರಿಲ್ಲ, ಪಕ್ಷವಾಗಿಯೂ ಉಳಿದಿಲ್ಲ. ಪಂಗಡಗಳಿಂದ ತುಂಬಿಕೊಂಡಿದೆ’ ಎಂದು ಶಿವರಾಮ ಹೆಬ್ಬಾರ ಅವರು ಇತ್ತೀಚೆಗೆ ಹೇಳಿದ್ದರು.

ಎಸ್.ಟಿ. ಸೋಮಶೇಖರ್ ಅವರೂ ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.