ADVERTISEMENT

‘ಬೆಳಗಾವಿಯಲ್ಲಿ ಮಾದಿಗರ ಸಮಾವೇಶ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 15:57 IST
Last Updated 7 ಡಿಸೆಂಬರ್ 2024, 15:57 IST
<div class="paragraphs"><p> ನಾರಾಯಣಸ್ವಾಮಿ</p></div>

ನಾರಾಯಣಸ್ವಾಮಿ

   

ಬೆಂಗಳೂರು: ‘ಒಳಮೀಸಲಾತಿಗೆ ಒತ್ತಾಯಿಸಿ 16ರಂದು ಬೆಳಗಾವಿಯಲ್ಲಿ ಮಾದಿಗ ಸಂಘಟನೆಯ ಸಮಾವೇಶ ನಡೆಸುತ್ತೇವೆ’ ಎಂದು ಮಾಜಿ ಕೇಂದ್ರ ಸಚಿವ ಆನೇಕಲ್‌ ನಾರಾಯಣಸ್ವಾಮಿ ತಿಳಿಸಿದರು.

ಒಳಮೀಸಲಾತಿಗೆ ಸಂಬಂಧಿಸಿದಂತೆ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಲವು ಸಂಘಟನೆಗಳು ಭಾಗಿಯಾಗಲಿವೆ’ ಎಂದರು.

ADVERTISEMENT

‘ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಯಾಚಿಸಿ ಮತ್ತು ಸಮಾವೇಶಕ್ಕೆ ಬರುವಂತೆ ಆಗ್ರಹಿಸಿ ಎಲ್ಲ ಸಚಿವರು ಮತ್ತು ಎಲ್ಲ ಪಕ್ಷದ ಶಾಸಕರ ಮನೆಗಳ ಮುಂದೆ ಇದೇ 14ರಂದು ತಮಟೆ ಚಳವಳಿ ನಡೆಸಲಾಗುತ್ತದೆ’ ಎಂದು ಅವರು ತಿಳಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಎ.ನಾರಾಯಣಸ್ವಾಮಿ, ಶಾಸಕ ಮಾನಪ್ಪ ವಜ್ಜಲ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌, ಪರಿಶಿಷ್ಟ ಜಾತಿಗಳ ಮೋರ್ಚಾ ಉಪಾಧ್ಯಕ್ಷ ಮಂಜುನಾಥ್‌ ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.