ADVERTISEMENT

ಪ್ರಜ್ಞೆ ಇಲ್ಲದೇ ಮಾತನಾಡಿ ಕ್ಷಮೆ ಕೇಳುವುದೇ BJP ಸಂಸ್ಕೃತಿ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 7:36 IST
Last Updated 28 ಮೇ 2025, 7:36 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಬಿಜೆಪಿಯವರು ಕ್ಷಮೆ ಕೇಳುವುದರಲ್ಲಿ ಸಾವರ್ಕರ್ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.

ಹಿಂದುತ್ವದ ‍ಪ್ರತಿಪಾದಕ ವಿ.ಡಿ. ಸಾವರ್ಕರ್ ಅವರ ಜನ್ಮದಿನದಂದೇ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ.

‘ಸೋಫಿಯಾ ಖುರೇಶಿ ಭಯೋತ್ಪಾದಕರ ಸಹೋದರಿ ಎಂದಿದ್ದ ವಿಜಯ್ ಶಾ ಕ್ಷಮೆ ಕೋರಿದರು. ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದವರು ಎಂದಿದ್ದ ರವಿಕುಮಾರ್ ಕ್ಷಮೆ ಕೋರಿದರು. ನನಗೆ ನಾಯಿ ಎಂದಿದ್ದ ನಾರಾಯಣಸ್ವಾಮಿಯವರು ವಿಷಾದಿಸಿದರು. ಬಿಜೆಪಿಯವರು ‘Sorry ಸಾವರ್ಕರ್’ ಅವರನ್ನು ಅಕ್ಷರಶಃ ಪಾಲನೆ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ADVERTISEMENT

‘ಪ್ರಜ್ಞೆ ಇಲ್ಲದೆ, ಮೆದುಳಿಗೂ ನಾಲಿಗೆಗೂ ಸಂಪರ್ಕವಿಲ್ಲದೆ ಮಾತನಾಡುವ ಬಿಜೆಪಿಯವರು ಕ್ಷಮೆ ಕೇಳುವುದರಲ್ಲಿ ಸಾವರ್ಕರ್ ಸಂಪ್ರದಾಯದಲ್ಲಿ ಮುಂದುವರಿಯುತ್ತಿದ್ದಾರೆ. ಅವರನ್ನು ಮೀರಿಸುತ್ತಿದ್ದಾರೆ! ನನಗೆ ಅದರಲ್ಲಿ ಸಂದೇಹವಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.