ADVERTISEMENT

ಸಿದ್ದರಾಮಯ್ಯ ‘ಮರ್ಯಾದಪುರುಷ’: ಬಿಜೆಪಿ ವ್ಯಂಗ್ಯದ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 13:37 IST
Last Updated 18 ಜನವರಿ 2019, 13:37 IST
   

ಬೆಂಗಳೂರು: ಆಪರೇಷನ್‌ ಕಮಲ, ರೆಸಾರ್ಟ್‌ ರಾಜಕಾರಣ, ಮೈತ್ರಿ ಬಿಕ್ಕಟ್ಟು... ಹೀಗೆರಾಜ್ಯ ರಾಜಕಾರಣದಲ್ಲಿ ಸಾಕಷ್ಟು ತಿರುವುಗಳು ಕಾಣಿಸಿಕೊಳ್ಳುತ್ತಿರುವ ನಡುವೆಯೇ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷಸಿದ್ದರಾಮಯ್ಯ ಅವರನ್ನು ಬಿಜೆಪಿ ಕೆಣಕಿದೆ.

ಸಿದ್ದರಾಮಯ್ಯ ಅವರಿಗೆ ‘ಮರ್ಯಾದಾಪುರುಷ’ಎಂದು ಕರೆದಿರುವ ಟ್ವೀಟ್‌ ಅನ್ನು ಪ್ರಕಟಿಸಿರುವಬಿಜೆಪಿ, ಯಾವೆಲ್ಲ ಕಾರಣಕ್ಕೆ ಈ ಹೆಸರು ಪಡೆಯಲು ಅವರುಅರ್ಹರು ಎಂಬ ಅಂಶಗಳನ್ನುಅದರಲ್ಲಿ ನಮೂದಿಸಿವ್ಯಂಗ್ಯ ಮಾಡಿದೆ.

ಬಿಜೆಪಿಯ ಈ ಟ್ವೀಟ್‌ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ಅವರ ಪರ ಸಾಕಷ್ಟು ಮಂದಿ ಬ್ಯಾಟಿಂಗ್‌ ಮಾಡಿದ್ದಾರೆ. ಆಪರೇಷನ್‌ ಕಮಲ ಕೈಗೂಡದ ನಿರಾಸೆಯನ್ನು ಸಿದ್ದರಾಮಯ್ಯ ಅವರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂಬೆಲ್ಲಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ADVERTISEMENT

ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಾಜಶೇಖರ ತಳವಾರ್‌ ಎಂಬುವವರು ‘ಹೌದು ನಮ್ಮ ಪಾಲಿಗೆ ಸಿದ್ದರಾಮಯ್ಯ ಅವರು ಮರ್ಯಾದಾ ಪುರುಷೋತ್ತಮರು. ಏಕೆಂದರೆ ಅವರು ಹುಟ್ಟಿದಾರಭ್ಯ ತಮ್ಮ ಹೆಸರಿನ ಜೊತೆಗೆ ರಾಮನ ಹೆಸರು ಹೊಂದಿದ್ದಾರೆ. ಬೂಕನಕೆರೆ ಬಿಟ್ಟು ಇನ್ನೆಲ್ಲೋ ಬೀಡು ಬಿಟ್ಟವರಂತಲ್ಲ. ಸಿದ್ಧರಾಮನ ಹುಂಡಿಯ ಮಣ್ಣಿನ ಮಗ ಕಣ ಕಣದಲ್ಲೂ ಮರ್ಯಾದಾ ಪುರುಷೋತ್ತಮನ ಛಾಪು ಇದೆ. ರಾಜಕೀಯ ಏರಿಳಿತ ಎನ್ನುವುದು ಸಹಜ, ತಿಳಿಯಿರಿ‘ ಎಂದು ಟೀಕಿಸಿದ್ದಾರೆ.

‘ಆಪರೇಷನ್ ಫೈಲ್ ಆಗಿದಕ್ಕೆ ಬ್ಲೂಜೇಪಿಗರಿಗೆ ಧಗ ಧಗ ಎಂದುಉರಿಯುತ್ತಿದೆ ಎನಿಸುತ್ತದೆ. ಬಿಜೆಪಿಯಲ್ಲಿ ಸಿದ್ದು ಅಥವಾ ಡಿಕೆಶಿ ಅಂಥವರು ಒಬ್ರು ಇದ್ದಿದ್ರೆ ಮೈತ್ರಿ ಸರ್ಕಾರ ಯಾವಾಗಲೋ ಬಿದ್ದೋಗಿರೋದು....’ಎಂದು ಶಿವು ಎಂಬುವವರು ಟ್ವೀಟ್‌ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.