ADVERTISEMENT

ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 16:18 IST
Last Updated 31 ಡಿಸೆಂಬರ್ 2025, 16:18 IST
ಬಿಎಂಟಿಸಿ ಬಸ್‌
ಬಿಎಂಟಿಸಿ ಬಸ್‌   

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜ.4ರಂದು ಆಯೋಜಿಸಿರುವ ಚಿತ್ರಸಂತೆಗೆ ತೆರಳುವವರಿಗೆ ಅನುಕೂಲ ಮಾಡಿಕೊಡಲು ಬಿಎಂಟಿಸಿ ಬಸ್‌ಗಳ ವಿಶೇಷ ಸಂಚಾರ ಇರಲಿದೆ.

ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಪ್ರತಿ ಹತ್ತು ನಿಮಿಷಕ್ಕೊಂದು ಬಸ್‌ ಇರಲಿದೆ. ಬಸ್‌ ಪ್ರಯಾಣ ದರ ₹15 ನಿಗದಿ ಮಾಡಲಾಗಿದೆ. ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಆನಂದ ರಾವ್‌ ಸರ್ಕಲ್‌, ವಿಧಾನ ಸೌಧ, ಶಿವಾನಂದ ಸ್ಟೋರ್‌ ಮೂಲಕ ಮತ್ತು ಮಂತ್ರಿ ಮಾಲ್‌ ಮೆಟ್ರೊ ನಿಲ್ದಾಣ, ಲಿಂಕ್‌ ರಸ್ತೆ, ಶಿವಾನಂದ ಸ್ಟೋರ್‌ ಮೂಲಕ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT