ADVERTISEMENT

ಕುತ್ತಿಗೆಗೆ ವೇಲ್‌ ಸುತ್ತಿಕೊಂಡು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:48 IST
Last Updated 19 ಮೇ 2019, 19:48 IST

ಮಡಿಕೇರಿ: ಮನೆಯಲ್ಲಿ ಆಟ ಆಡುತ್ತಿರುವಾಗ ಕುತ್ತಿಗೆಗೆ ವೇಲ್‌ ಸುತ್ತಿಕೊಂಡು8 ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ.

ಆತ ತಾಲ್ಲೂಕಿನ ಹೆಬ್ಬಟ್ಟಗೇರಿಯ ನಿವಾಸಿ.ಪ್ರಕೃತಿ ವಿಕೋಪದ ವೇಳೆ ಮನೆ ಕಳೆದುಕೊಂಡಿದ್ದ ಬಾಲಕನ ಕುಟುಂಬದವರು ಮಡಿಕೇರಿ ಹೊರವಲಯದ ಮನೆಯೊಂದರಲ್ಲಿ ವಾಸವಾಗಿದ್ದರು. ಶಾಲೆಗೆ ರಜೆಯಿದ್ದ ಕಾರಣಕ್ಕೆ ಬಾಲಕ ಮನೆಯಲ್ಲಿ ಆಟವಾಡುತ್ತಿದ್ದ. ಆಕಸ್ಮಿಕವಾಗಿ ವೇಲ್‌ ಕುತ್ತಿಗೆಗೆ ಸುತ್ತಿಕೊಂಡಿದೆ. ಅದನ್ನು ಬಿಡಿಸಿಕೊಳ್ಳಲು ಒದ್ದಾಡಿದ್ದಾನೆ. ಆತನ ತಂದೆ ಮನೆಗೆ ಬಂದು ನೋಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.

ಮಳೆ ದುರಂತ ವಿವರಿಸಿದ್ದ ಬಾಲಕ: ಪ್ರಾಕೃತಿಕ ವಿಕೋಪದ ವೇಳೆ ಮನೆ ಕಳೆದುಕೊಂಡಿದ್ದ ಬಾಲಕನ ಕುಟುಂಬದವರು ಮೈತ್ರಿ ಸಮುದಾಯ ಭವನದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಅಂದು ಸಂತ್ರಸ್ತರ ನೋವು ಆಲಿಸಲು ಬಂದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಗ್ರಾಮದಲ್ಲಿ ಸಂಭವಿಸಿದ್ದ ದುರಂತವನ್ನು ಚಿತ್ರ ಬಿಡಿಸಿ ತೋರಿಸುವ ಮೂಲಕ ಮನವರಿಕೆ ಮಾಡಿಕೊಟ್ಟಿದ್ದ ಈ ಬಾಲಕ. ಚಿತ್ರ ವೀಕ್ಷಿಸಿದ್ದ ಸಚಿವರಿಗೆ ಮಳೆಯ ಕರಾಳ ಸ್ಥಿತಿ ಅರಿವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.