ADVERTISEMENT

ಬೆಳಗಾವಿ | ಚೀನಾ ಉತ್ಪನ್ನಗಳ ಬಹಿಷ್ಕಾರ ಆಂದೋಲನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 14:22 IST
Last Updated 30 ಜೂನ್ 2020, 14:22 IST
ಬೆಳಗಾವಿಯಲ್ಲಿ ಹಮಾರಾ ದೇಶ ಸಂಘಟನೆಯವರು ಚೀನಾ ಉತ್ಪಾದಿಸಿದ ವಸ್ತುಗಳ ಬಹಿಷ್ಕಾರ ಆಂದೋಲನ ನಡೆಸಿದರು 
ಬೆಳಗಾವಿಯಲ್ಲಿ ಹಮಾರಾ ದೇಶ ಸಂಘಟನೆಯವರು ಚೀನಾ ಉತ್ಪಾದಿಸಿದ ವಸ್ತುಗಳ ಬಹಿಷ್ಕಾರ ಆಂದೋಲನ ನಡೆಸಿದರು    

ಬೆಳಗಾವಿ: ಹಮಾರಾ ದೇಶ ಸಂಘಟನೆಯಿಂದ ಹುತಾತ್ಮ ಯೋಧರ ಗೌರವಾರ್ಥ ಚೀನಾ ಉತ್ಪಾದಿಸಿದ ವಸ್ತುಗಳ ಬಹಿಷ್ಕಾರ ಆಂದೋಲನವನ್ನು ನಗರದಲ್ಲಿ ಜೂನ್ 25ರಿಂದ ಸೋಮವಾರದವರೆಗೆ ನಡೆಸಲಾಯಿತು.

ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರೋತ್ಸಾಹ ಮತ್ತು ಬ್ಯಾನ್ ಚೈನೀಸ್ ಪ್ರಾಡಕ್ಟ್ಸ್‌ ಎನ್ನುವ ಭಿತ್ತಿಪತ್ರಗಳನ್ನು ಟಿಳಕವಾಡಿ ಹಾಗೂ ಸುತ್ತಲಿನ ಪ್ರದೇಶದ ಪ್ರತಿ ಅಂಗಡಿಗಳು ಮತ್ತು ಕಚೇರಿಗಳಿಗೆ ಅಂಟಿಸಲಾಯಿತು. ಅಭಿಯಾನದಲ್ಲಿ ಅಂಗಡಿಗಳ ಮಾಲೀಕರು ಮತ್ತು ನಾಗರಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು ಎಂದು ಸಂಘಟನೆಯ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಕಾರ್ಯಕರ್ತರಾದ ದೇವದತ್ತ, ಮುಖೇಶ, ಮನೋಜ, ಪ್ರಶಾಂತ, ಪರುಶುರಾಮ, ದಶರಥ, ಅನಿಲ, ಪವಮಾನ, ನಿತಿನ, ಪ್ರಕಾಶ, ಲಕ್ಷ್ಮಣ, ರಾಜು, ರಮಾ, ವೈಷ್ಣವಿ, ಪೂಜಾ, ತನ್ವಿ, ಮೃಣಾಲಿನಿ, ಅದಿತಿ, ಪ್ರಗತಿ, ಸವಿತಾ, ಶುಭಾಂಗಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.