ಆಳಂದ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ನಿರಗುಡಿ ಗ್ರಾಮದಲ್ಲಿ ಮೂವರುಪುತ್ರರು ತಮ್ಮ ಮನೆ ಅಂಗಳದಲ್ಲಿ ತಂದೆ–ತಾಯಿಯ ಪುತ್ಥಳಿ ಪ್ರತಿಷ್ಠಾಪಿಸಿದ್ದಾರೆ.
₹2 ಲಕ್ಷ ವೆಚ್ಚಮಾಡಿದಿ.ವಿಶ್ವನಾಥ ಪಾತ್ರೆ ಹಾಗೂ ದಿ.ಲಕ್ಷ್ಮಿಬಾಯಿ ಪಾತ್ರೆ ಅವರ ಪುತ್ಥಳಿ ನಿರ್ಮಿಸಿದ್ದು,ಭಾನುವಾರ ಅನಾವರಣ ಕಾರ್ಯಕ್ರಮ ನಡೆಯಿತು.
ವಿಶ್ವನಾಥ ಪಾತ್ರೆ ಅವರ ಹಿರಿಯ ಪುತ್ರ ಜಗನ್ನಾಥ ಗ್ರಾಮ ಪಂಚಾಯಿತಿ ಸದಸ್ಯರಾದರೆ, ಇನ್ನೊಬ್ಬ ಪುತ್ರ ದಶರಥ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಕೊನೆಯ ಪುತ್ರ ಧನರಾಜ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.