ADVERTISEMENT

ಕರ್ನಾಟಕದ ಬಸ್‌ಗಳಲ್ಲಿ ಪ್ರಯಾಣಿಕರಿಂದ ಹಣ ದೋಚಿ ಪರಾರಿಯಾಗಿದ್ದ ವ್ಯಕ್ತಿ ಬಂಧನ

ಪಿಟಿಐ
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
<div class="paragraphs"><p>ಬಂಧನ</p></div>

ಬಂಧನ

   

ನವದೆಹಲಿ: ಕರ್ನಾಟಕದಲ್ಲಿ ಬಸ್‌ ಪ್ರಯಾಣಿಕರಿಂದ 10 ಕೆ.ಜಿ ಬೆಳ್ಳಿ ಮತ್ತು ₹3 ಲಕ್ಷ ನಗದು ಕ‌ದ್ದು, ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಪೊಲೀಸರ ಮನವಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ADVERTISEMENT

ಬಂಧಿತನನ್ನು ಉತ್ತರ ಪ್ರದೇಶದ ಅಮೋಹ್ರಾ ನಿವಾಸಿ ಮೊಹಮ್ಮದ್‌ ಫರ್ಮಾನ್‌ ಎಂದು ಗುರುತಿಸಲಾಗಿದ್ದು, ಈತ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಚಲಿಸುವ ಬಸ್‌ಗಳಲ್ಲಿ ಕಳ್ಳತನ ಮಾಡುವ ಸಂಘಟಿತ ಅಂತರರಾಜ್ಯ ಗ್ಯಾಂಗ್‌ನ ಸಕ್ರಿಯ ಸದಸ್ಯ. ಪ್ರಯಾಣಿಕರು ಅಥವಾ ಬಸ್‌ ಸಿಬ್ಬಂದಿಯ ಸೋಗಿನಲ್ಲಿರುವ ಈ ಗ್ಯಾಂಗ್‌ ಸದಸ್ಯರು, ಪ್ರಯಾಣಿಕರು ನಿದ್ರಿಸುವಾಗ ಕಳ್ಳತನ ಮಾಡುತ್ತಿದ್ದರು. 

ಬಂಧಿತ ಆರೋಪಿಯ ವಿರುದ್ಧ ಅನೇಕ ರಾಜ್ಯಗಳಲ್ಲಿ ದೂರು ದಾಖಲಾಗಿವೆ. ಗ್ಯಾಂಗ್‌ನ ಇತರ ಸದಸ್ಯರನ್ನು ಪತ್ತೆಹಚ್ಚಲು ಮತ್ತು ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.