ADVERTISEMENT

ಉಪ ಚುನಾವಣೆ: ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 8:42 IST
Last Updated 2 ಡಿಸೆಂಬರ್ 2019, 8:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಡಿಸೆಂಬರ್‌5ರಂದು ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರ ಎಲ್ಲೆಡೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಭದ್ರತೆ ದೃಷ್ಟಿಯಿಂದ ನಗರದಾದ್ಯಂತ ಇಬ್ಬರು ಹೆಚ್ಚುವರಿ ಪೊಲೀಸ್​ ಕಮಿಷನರ್, ಏಳು ಡಿಸಿಪಿ, ಎಸಿಪಿ, 30 ಇನ್ ಸ್ಪೆಕ್ಟರ್​ಗಳು, 68 ಪಿಎಸ್​ಐ. 160 ಎಸ್​ಐ, 1,666 ಕಾನ್​ಸ್ಟೆಬಲ್​ಗಳು, 10 ಎಪಿಫ್, 38 ಕೆಎಸ್​ಆರ್​ಪಿ 40 ಸಿಎಆರ್, 4 ಆರ್​ಐವಿ, 38 ರೂಟ್ ಮಾರ್ಚ್ ನಿಯೋಜನೆ ಮಾಡಲಾಗಿದೆ ಎಂದರು.

ADVERTISEMENT

ಮಂಗಳವಾರದಿಂದ ನಿಷೇಧಾಜ್ಞೆ ಜಾರಿ:ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಸೆಕ್ಷನ್ 144 ಅಡಿ ನಿಷೇಧಾಜ್ಷೆ ಜಾರಿ ಮಾಡಲಾಗುವುದು. ನಿಷೇಧಾಜ್ಞೆ ಇದೇ 6ರವರೆಗೆ ಜಾರಿಯಲ್ಲಿ ಇರಲಿದೆ.

ಅಹಿತಕರ ಘಟನೆ ನಡೆಸುವ ರೌಡಿಗಳ ಮಟ್ಟ ಹಾಕುವ ದೃಷ್ಟಿಯಿಂದ ಕೆಲವು ರೌಡಿಗಳಿಂದ ಮುಚ್ಚಳಿಕೆ ಬರೆಸಿ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.