ADVERTISEMENT

‘ಬಿಜೆಪಿಯವರು ಮಾನಗೆಟ್ಟವರು’ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ ರವಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 11:56 IST
Last Updated 17 ಜನವರಿ 2019, 11:56 IST
ಸಿ.ಟಿ. ರವಿ
ಸಿ.ಟಿ. ರವಿ   

ಬೆಂಗಳೂರು: ‘ಮರ್ಯಾದಾ ಪುರುಷೋತ್ತಮ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಒಬ್ಬರೇ, ಅದಕ್ಕೆ ಅವರನ್ನು ರಾಜ್ಯದ ಜನ ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.

‘ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟು ಜೆಡಿಎಸ್‌ಗೆ ಬೆಂಬಲ ಕೊಟ್ಟಿದ್ದಾರೆ. ಮಾಜಿ ಸಿಎಂ ಆದ ನಂತರವೂ ಕಾವೇರಿ ನಿವಾಸದಲ್ಲಿ ಇದ್ದಾರೆ. ಅವರಿಗಿಂತ ಮರ್ಯಾದಸ್ಥರು ಇನ್ನೊಬ್ಬರಿಲ್ಲ’ ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರು ಪ್ರಭಾವ ಬೀರಿ ವಿಧಾನಸೌಧದಲ್ಲಿ ಕಚೇರಿ ಹಾಗೂ ಕೊಠಡಿಯನ್ನು ಪಡೆದಿದ್ದಾರೆ ಎಂದು ದೂರಿದರು.

ADVERTISEMENT

ಬಂಡಾಯ ಅನ್ನೋದು ‘ಖರೀದಿ ಆದ್ರೆ’ ನಿಮ್ಮದು ಏನು..?
ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದೀದ್ದೀರಲ್ಲಾ ನಿಮ್ಮದು ಖರಿದಿಯೇ, ಬಾಲಕೃಷ್ಣ, ಜಮೀರ್, ಅಖಂಡ ಶ್ರೀನಿವಾಸ ಮೂರ್ತಿ, ರಮೇಶ್ ಬಂಡಿಸಿದ್ದೇಗೌಡ ಇವರೆಲ್ಲಾ ನಿಮ್ಮ ಜೊತೆ ಬಂದಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿರುದ್ದ ಕ್ರಾಸ್ ಓಟ್ ಮಾಡಿಸಿದ್ರಿ ಅದು ಮನೆಮುರುಕತನ ಅಲ್ವಾ..? ನಿಮ್ಮ ಪಾರ್ಟಿಗೆ ಮರ್ಯಾದೆ ಇದ್ದರೆ ಬಂಡಾಯ ಎದ್ದಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ. ಯಾವ ಆಮೀಷ ಒಡ್ಡಿ ಅತೃಪ್ತರನ್ನ ಮತ್ತೆ ಕರೆದುಕೊಂಡು ಬಂದ್ರಿ..? ನಿಮಗೆ ಮರ್ಯಾದೆ ಇದ್ರೆ ಬಂಡಾಯ ಎದ್ದೋರನ್ನ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಸವಾಲು ಹಾಕಿದರು.
‘ನಾವು ಹರಿಯಾಣದ ಗುರುಗ್ರಾಮಕ್ಕೆ ಬರ ಅಧ್ಯಯನಕ್ಕಾಗಿ ಹೋಗಲಿಲ್ಲ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೋಗಿದ್ದೇವು. ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆಸಲಾಯಿತು’ ಎಂದು ಹೇಳಿದರು.

ನೀವು (ಕಾಂಗ್ರೆಸ್‌–ಜೆಡಿಎಸ್‌) ತಾಜ್‌ ವೆಸ್ಟೆಂಡ್‌ನಲ್ಲಿ ಅಧ್ಯಯನ ಮಾಡುತ್ತಿದ್ದೀರಾ.. ಹೋಲ್ ಸೇಲ್ ಡೀಲ್, ರೀಟೈಲ್ ಡೀಲ್ ನಿಮ್ಮ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

‘ಭತ್ತಕ್ಕೆ ಬೆಂಬಲ ಬೆಲೆನಿಗಧಿಮಾಡಲಾಗಿದೆ. ಆದರೆ ಇವರೆಗೂ ಖರೀದಿ ಕೇಂದ್ರ ತೆರೆದಿಲ್ಲ ಮುಖ್ಯಮಂತ್ರಿಯಾಗಿ ನೀವು (ಕುಮಾರಸ್ವಾಮಿ) ಏನು ಕೆಲಸ ಮಾಡಿದ್ದೀರಾ’ ಎಂದು ಪ್ರಶ್ನಿಸಿದರು.

‘ಆಪರೇಶನ್ ಕಮಲ’ ಪ್ರಸ್ಥಾಪಿಸಿದ ಅವರು,‘ ಕಾಂಗ್ರೆಸ್‌ನವರು ನಮ್ಮಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದರು.

‘ಯುದ್ದದಲ್ಲಿ ಬಿಜೆಪಿ ಸೋತಿಲ್ಲ.‌ಅಮಿತ್ ಶಾ ‘ಅರ್ಜುನ’ ಇದ್ದಂತೆ. ಅವರಿಗೆಚಕ್ರವ್ಯೂಹ ಭೇಧಿಸೋದು ಗೊತ್ತು. ವ್ಯೂಹದಿಂದ ಆಚೆ ಹೇಗೆ ಬರೋದು ಎಂಬುದು ಗೊತ್ತಿದೆ. ಯಾವ ಸಂಧರ್ಭದಲ್ಲಿ ಯಾವ ಪಾನ್ ಮೂವ್ ಮಾಡಬೇಕೋ ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.