ADVERTISEMENT

ನಮ್ಮ ಸಮುದಾಯದವರಿಗೆ ಸಚಿವ ಸ್ಥಾನ ಬೇಕು: ಕೆ.ಎನ್.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 16:26 IST
Last Updated 24 ಅಕ್ಟೋಬರ್ 2025, 16:26 IST
   

ಬೆಂಗಳೂರು: ‘ನಮ್ಮ ಸಮುದಾಯದ 16 ಶಾಸಕರಿದ್ದೇವೆ. ಸಚಿವ ಸ್ಥಾನದಿಂದ ಇಬ್ಬರನ್ನು ಇಳಿಸಲಾಗಿದೆ. ಆ ಸ್ಥಾನಗಳನ್ನು ತುಂಬಲೇಬೇಕು’ ಎಂದು ಕಾಂಗ್ರೆಸ್‌ ಶಾಸಕ ಕೆ.ಎನ್‌.ರಾಜಣ್ಣ ಆಗ್ರಹಿಸಿದರು. 

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ದೆಹಲಿಗೆ ಹೋಗುತ್ತೇನೆ. ಸಚಿವ ಸ್ಥಾನ ಕೇಳಲು ಅಲ್ಲ. ಬದಲಿಗೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಹೋಗುತ್ತೇನೆ. ಬಿಹಾರ ಚುನಾವಣೆಯ ಫಲಿತಾಂಶದ ನಂತರ ಹೈಕಮಾಂಡ್‌ ನನಗೆ ಸಮಯ ನೀಡಬೇಕು’ ಎಂದರು.

ಸಚಿವ ಸಂಪುಟಕ್ಕೆ ಮರಳುವ ಸಮಯ ಬಂದಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ನನ್ನದು ಯಾವಾಗಲೂ ಒಳ್ಳೆಯ ಸಮಯವೇ. ಸಚಿವ ಸಂಪುಟಕ್ಕೆ ಮರಳುವ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಆದರೆ ನಮ್ಮ ಸಮುದಾಯದವರಿಗೆ ಸಂಪುಟದಲ್ಲಿ ಸ್ಥಾನ ನೀಡಲೇಬೇಕು’ ಎಂದು ಉತ್ತರಿಸಿದರು. 

ADVERTISEMENT
‘ನೋಟಿಸ್‌ ನೀಡಲಿ, ನೋಡೋಣ’
‘ಯತೀಂದ್ರ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಯತೀಂದ್ರ ಅವರಿಗೆ ನೋಟಿಸ್‌ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಬಣದವರು ಒತ್ತಾಯಿಸುತ್ತಿದ್ದಾರೆ. ಆ ಬಣದವರು ಏನು ತೀರ್ಮಾನ ಮಾಡುತ್ತಾರೆ ಎಂದು ನೋಡೋಣ. ಆನಂತರ ಅದಕ್ಕೆ ಪ್ರತಿಕ್ರಿಯೆ ನೀಡಿದರೆ ಆಯಿತು’ ಎಂದು ಕೆ.ಎನ್.ರಾಜಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.