ADVERTISEMENT

ಶಂಕರ್, ನಾಗೇಶ್‌ಗೆ ಸಚಿವಗಿರಿ

12ಕ್ಕೆ ಸಂಪುಟ ವಿಸ್ತರಣೆ: ಫಾರೂಕ್‌ಗೂ ಅದೃಷ್ಟ?

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 18:51 IST
Last Updated 8 ಜೂನ್ 2019, 18:51 IST
   

ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಒಂದು ವರ್ಷದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಇದೇ 12ರ ಬೆಳಿಗ್ಗೆ 11.30ಕ್ಕೆ ಸಮಯ ನಿಗದಿಯಾಗಿದೆ.

ಕಾಂಗ್ರೆಸ್‌ ಪಾಲಿನ ಒಂದು ಸ್ಥಾನಕ್ಕೆ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ಹಾಗೂ ಜೆಡಿಎಸ್‌ ಪಾಲಿನ ಒಂದು ಸಚಿವ ಸ್ಥಾನಕ್ಕೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಬಿಎಸ್‌ಪಿಗೆ ಬಿಟ್ಟುಕೊಟ್ಟಿದ್ದ ಒಂದು ಸಚಿವ ಸ್ಥಾನವನ್ನು ವಿಧಾನಪರಿಷತ್ತಿನ ಜೆಡಿಎಸ್‌ ಸದಸ್ಯ, ಉದ್ಯಮಿ ಬಿ.ಎಂ. ಫಾರೂಕ್ ಅವರಿಗೆ ನೀಡುವ ಚಿಂತನೆ ಆ ಪಕ್ಷದಲ್ಲಿ ನಡೆದಿದೆ.

ADVERTISEMENT

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಶಂಕರ್, ಕಾಂಗ್ರೆಸ್ ಸಹ ಸದಸ್ಯನಾಗಲು ಒಪ್ಪಿದ್ದಾರೆ.

‘ಆಪರೇಷನ್ ಕಮಲ’ಕ್ಕೆ ತಡೆ ಹಾಕುವ ಮೊದಲ ಭಾಗವಾಗಿ ಪಕ್ಷೇತರರಿಗೆ ಮಣೆ ಹಾಕಲು ಮೈತ್ರಿ ನಾಯಕರು ನಿರ್ಧರಿಸಿದ್ದಾರೆ. ಡಿಸೆಂಬರ್‌ನಲ್ಲಿ ಪುನರ್‌ರಚನೆ ನಡೆಯಲಿದ್ದು, ಆಗ ಕಾಂಗ್ರೆಸ್‌ ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸಲಾಗುವುದು ಎಂಬ ಭರವಸೆ ನೀಡಲಾಗಿದೆ.

ಸಿಡಿದ ಪಾಟೀಲ

‘ಇದು ತೋಳ ಬಂತು ತೋಳ ಕತೆ. ಅಪಮಾನದಿಂದ ನೋವುಂಡಿದ್ದೇನೆ. ಮಂತ್ರಿ ಸ್ಥಾನ ಬೇಕಾಗಿಲ್ಲ. ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿರಿಯರ ಕೋಟಾದಲ್ಲಿ 15 ಜನ ಸಚಿವರಾಗುತ್ತಾರೆ. ಉಳಿದವರು ಸ್ಪೇರ್ ಪಾರ್ಟ್‌ಗಳಂತೆ ಇರಬೇಕಾ’ ಎಂದು ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.