ADVERTISEMENT

ಸಂಪುಟ ಪುನರ್‌ ರಚನೆ | ನನ್ನ ಕೋಟಾ ಬೇರೆ, ಮಗಳ ಕೋಟಾ ಬೇರೆ: ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 15:25 IST
Last Updated 19 ನವೆಂಬರ್ 2025, 15:25 IST
ಕೆ.ಎಚ್‌.ಮುನಿಯಪ್ಪ 
ಕೆ.ಎಚ್‌.ಮುನಿಯಪ್ಪ    

ನವದೆಹಲಿ: ಸಚಿವ ಸಂಪುಟ ಪುನರ್‌ ರಚನೆ ಸಂದರ್ಭದಲ್ಲಿ ನನ್ನ ಕೋಟಾ ಬೇರೆ, ಮಗಳ (ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌) ಕೋಟಾ ಬೇರೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. 

ಬುಧವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾನು ಪಕ್ಷದ ಹಿರಿಯ ನಾಯಕ. ಅಲ್ಲದೇ, ನನ್ನ ಜಿಲ್ಲೆ ಬೇರೆ. ರೂಪಾ ಬೇರೆ ಜಿಲ್ಲೆ ಪ್ರತಿನಿಧಿಸುತ್ತಿದ್ದಾರೆ. ಅವರನ್ನು ನನ್ನ ಜತೆಗೆ ಹೋಲಿಕೆ ಮಾಡಬೇಡಿ. ನನ್ನ ಹಾಗೆ ಪಕ್ಷದಲ್ಲಿ ಹಲವು ಹಿರಿಯ ನಾಯಕರು ಇದ್ದಾರೆ’ ಎಂದು ಮಾರ್ಮಿಕವಾಗಿ ಹೇಳಿದರು. 

‘ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬೇಡಿಕೆ ಇದೆ. ಈ ವಿಷಯವನ್ನು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಸಂದರ್ಭ ಬರಲಿಲ್ಲ’ ಎಂದರು. 

ADVERTISEMENT

‘ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇನೆ. ಯಾರಿಗೆ ಏನೇ ಮಾತು ಕೊಟ್ಟಿದ್ದರೂ ಬೇಗನೇ ತೀರ್ಮಾನ ಮಾಡಿ ಎಂದು ಹೇಳಿದ್ದೇನೆ. ಪ್ರತಿದಿನ ಮುಖ್ಯಮಂತ್ರಿ ಬದಲಾವಣೆ ಎಂಬ ಸುದ್ದಿ ಬರುತ್ತಾ ಇರಬಾರದು. ಇಂತಹ ಗೊಂದಲಗಳಿಂದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಆಗಲಿದೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.