ADVERTISEMENT

ಪರ್ಯಾಯ ಇಂಧನದ ವಾಹನಗಳಿಗೆ ಪರ್ಮಿಟ್‌ ಕಡ್ಡಾಯ; ರಾಜ್ಯ ಸರ್ಕಾರ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 16:19 IST
Last Updated 3 ಜುಲೈ 2025, 16:19 IST
   

ಬೆಂಗಳೂರು: ಇವರೆಗೆ ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಎಥೆನಾಲ್ ಇಂಧನ ಬಳಿಸಿ ಸಂಚರಿಸುವ ವಾಹನಗಳಿಗೆ ರಹದಾರಿಯ (ಪರ್ಮಿಟ್‌) ಅಗತ್ಯವಿರಲಿಲ್ಲ. ಇನ್ನು ಮುಂದೆ ರಹದಾರಿ ಪಡೆದೇ ಸಂಚರಿಸಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಪರ್ಯಾಯ ಇಂಧನಗಳನ್ನು ಬಳಸುವ ವಾಹನಗಳಿಗೆ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 66 (1)ರ ಅಡಿ ಪರ್ಮಿಟ್‌ ಪಡೆಯುವುದಕ್ಕೆ ವಿನಾಯತಿ ನೀಡಲಾಗಿತ್ತು. 2022ರಿಂದ ಈ ವಿನಾಯಿತಿ ಜಾರಿಯಲ್ಲಿತ್ತು. ಈ ವಿನಾಯಿತಿಯನ್ನು ಸರ್ಕಾರ ರದ್ದುಪಡಿಸಿದೆ.

ಈಗಾಗಲೇ ನೋಂದಣಿಯಾಗಿರುವ  ಬ್ಯಾಟರಿ ಚಾಲಿತ, ಮಿಥೆನಾಲ್ ಮತ್ತು ಎಥೆನಾಲ್ ಇಂಧನ ಬಳಸುವ, ಪರ್ಮಿಟ್‌ ಪಡೆಯದೇ ಸಂಚರಿಸುತ್ತಿರುವ ವಾಹನಗಳು ಹಾಗೂ ಹೊಸದಾಗಿ ನೋಂದಣಿಯಾಗುವ ವಾಹನಗಳಿಗೆ ಸಂಬಂಧಿಸಿದಂತೆ ರಹದಾರಿಯನ್ನು ಶುಲ್ಕ ರಹಿತವಾಗಿ ಮಂಜೂರು ಮಾಡಬೇಕು ಎಂದು ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.