ADVERTISEMENT

ಆಸ್ತಿ ವಿವರ ಸಲ್ಲಿಸದ 19 ಶಾಸಕರು: ರಾಜ್ಯಪಾಲರಿಗೆ ವರದಿ ಕಳುಹಿಸಿದ ಲೋಕಾಯುಕ್ತರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 18:43 IST
Last Updated 2 ಡಿಸೆಂಬರ್ 2019, 18:43 IST
   

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳ 19 ಸದಸ್ಯರು ಗಡುವು ಮುಗಿದರೂ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ರಾಜ್ಯಪಾಲರಿಗೆ ವರದಿ ಕಳುಹಿಸಿದ್ದಾರೆ.

ಅನರ್ಹಗೊಂಡಿರುವ ಶಾಸಕರಾದಎಚ್‌.ವಿಶ್ವನಾಥ್‌, ಆರ್‌. ಶಂಕರ್‌ ಹೆಸರೂ ಲೋಕಾಯುಕ್ತರು ಕಳುಹಿಸಿರುವ ವರದಿಯಲ್ಲಿದೆ. ಇವರಿಬ್ಬರೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿದ್ದಾರೆ. ವಿಶ್ವನಾಥ್‌ ಪುನಃ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಶಂಕರ್ ಸ್ಪರ್ಧಿಸಿಲ್ಲ. ಆಸ್ತಿ ವಿವರ ಸಲ್ಲಿಸದ ಶಾಸಕರಲ್ಲಿ ಐವರು, ಹಿಂದಿನ ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು.

ನವೆಂಬರ್‌ 30ರಂದು ಕಳುಹಿಸಿರುವ ವರದಿಯಲ್ಲಿ ಆಡಳಿತ ಪಕ್ಷ ಬಿಜೆಪಿಯ 7, ಕಾಂಗ್ರೆಸ್‌ನ 7, ಜೆಡಿಎಸ್‌ನ 4, ಬಿಎಸ್‌ಪಿಯ ಒಬ್ಬ ಸದಸ್ಯರು ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್‌ 22(2)ರ ಪ್ರಕಾರ ಜನಪ್ರತಿನಿಧಿಗಳು ಪ್ರತಿ ವರ್ಷ ಜುಲೈ ಅಂತ್ಯದೊಳಗೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ವಿಧಾನಸಭೆಯ ಸದ್ಯದ ಬಲ 208. ವಿಧಾನಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 75.

ADVERTISEMENT

ವಿಧಾನಸಭೆ ಸದಸ್ಯರು

*ಎಂ.ಸಿ.ಮನಗೂಳಿ– ಸಿಂದಗಿ * ರಹೀಂಖಾನ್‌– ಬೀದರ್‌* ಜಮೀರ್‌ ಅಹಮದ್‌– ಚಾಮರಾಜಪೇಟೆ* ವೆಂಕಟರಮಣಪ್ಪ– ಪಾವಗಡ

*ಎಂ.ವೈ.ಪಾಟೀಲ– ಅಫ್ಜಲ್‌ಪುರ* ರಾಜ್‌ಕುಮಾರ್‌ ಪಾಟೀಲ್– ಸೇಡಂ *ಎಂ.ಪಿ ರೇಣುಕಾಚಾರ್ಯ– ಹೊನ್ನಾಳಿ* ಜ್ಯೋತಿಗಣೇಶ್‌– ತುಮಕೂರು *ರೂಪಕಲಾ– ಕೆಜಿಎಫ್‌*ಸತೀಶ್‌ರೆಡ್ಡಿ– ಬೊಮ್ಮನಹಳ್ಳಿ*ಎಂ. ಶ್ರೀನಿವಾಸ್‌– ಮಂಡ್ಯ*ಎನ್‌. ಮಹೇಶ್‌– ಕೊಳ್ಳೇಗಾಲ

ಪರಿಷತ್‌ ಸದಸ್ಯರು

*ತೇಜಸ್ವಿನಿಗೌಡ,*ಶ್ರೀಕಂಠೇಗೌಡ,* ಅಪ್ಪಾಜಿಗೌಡ,*ಕೆ.ಪಿ. ನಂಜುಂಡಿ, *ನಜೀರ್‌ ಅಹಮದ್‌,*ಮಲ್ಲಿಕಾರ್ಜುನ ಡಿ.ಯು,*ಸಿ.ಎಂ. ಇಬ್ರಾಹಿಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.