
ಬೆಂಗಳೂರು: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಭಾಗವಾಗಿ ಈವರೆಗೆ 6.13 ಕೋಟಿ ಜನರ ವಿವರಗಳನ್ನು ಕಲೆ ಹಾಕಲಾಗಿದ್ದು, 4.22 ಲಕ್ಷದಷ್ಟು ಕುಟುಂಬದವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೇಳಿದೆ.
ಆಯೋಗವು ನಡಸಿದ್ದ ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು ಶುಕ್ರವಾರಕ್ಕೆ (ಅಕ್ಟೋಬರ್ 31ಕ್ಕೆ) ಕೊನೆಗೊಂಡಿದೆ.
ರಾಜ್ಯದಾದ್ಯಂತ ಒಟ್ಟು 6.85 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಅದರಲ್ಲಿ 6.13 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, 72 ಲಕ್ಷ ಜನರು ಸಮೀಕ್ಷೆಯಲ್ಲಿ ಭಾಗಿಯಾಗಿಲ್ಲ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ರಾಜ್ಯದಾದ್ಯಂತ ನಡೆದ ಸಮೀಕ್ಷೆಯ ವೇಳೆ 34.49 ಲಕ್ಷ ಮನೆಗಳಿಗೆ ಬೀಗ ಹಾಕಲಾಗಿತ್ತು ಇಲ್ಲವೇ ಮನೆಗಳು ಖಾಲಿ ಇದ್ದವು. ಈ ಪೈಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲೇ 29 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಖಾಲಿ/ಬೀಗ ಹಾಕಲಾದ/ಸಮೀಕ್ಷೆ ಮಾಡಲಾಗದ ಮನೆಗಳು ಎಂದು ಗುರುತಿಸಲಾಗಿದೆ. ರಾಜ್ಯದಾದ್ಯಂತ ಒಟ್ಟು
ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು ಕೊನೆಗೊಂಡಿದ್ದರೂ, ಆನ್‌ಲೈನ್‌ನಲ್ಲಿ ಮಾಹಿತಿ ನಮೂದಿಸಲು ನವೆಂಬರ್ 10ರವರೆಗೆ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.