ADVERTISEMENT

ಪಿಯುಸಿ ಪರೀಕ್ಷೆ ಅಕ್ರಮಕ್ಕೆ 5 ವರ್ಷ ಜೈಲು, ₹ 5ಲಕ್ಷ ದಂಡ

ಮೊಬೈಲ್‌ ನಿಷೇಧ, ಮುಳ್ಳಿನ ಕೈಗಡಿಯಾರಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 4:26 IST
Last Updated 24 ಫೆಬ್ರುವರಿ 2020, 4:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾರ್ಚ್ 4ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದ್ದು, ಪ್ರಶ್ನೆಪತ್ರಿಕೆ ಸೋರಿಕೆ, ಮೊಬೈಲ್‌ ಬಳಕೆ, ಬದಲಿ ವ್ಯಕ್ತಿಯಿಂದ ಪರೀಕ್ಷೆ ಬರೆಸುವುದು,ನಕಲು ಮಾಡುವುದು ಸಹಿತ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿದರೆ ₹ 5 ಲಕ್ಷ ದಂಡ ಹಾಗೂ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ಅವರು ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳು ಮಾತ್ರವಲ್ಲ, ಕೊಠಡಿ ಮೇಲ್ವಿಚಾರಕರೂ ಪರೀಕ್ಷೆ ವೇಳೆ ಮೊಬೈಲ್‌ ಬಳಸುವಂತಿಲ್ಲ. ಎಲೆಕ್ಟ್ರಾನಿಕ್ ಕೈಗಡಿಯಾರ, ಇ–ಕ್ಯಾಮೆರಾ, ಲ್ಯಾಪ್‌ ಟಾಪ್‌ನಂತಹ ವಿದ್ಯುನ್ಮಾನ ಉಪಕರಣಗಳನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಫೆ. 26ರ ಒಳಗೆ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ವಿತರಿಸಬೇಕು ಎಂದು ತಿಳಿಸಲಾಗಿದೆ. ಪರೀಕ್ಷೆ 3 ಗಂಟೆ 15 ನಿಮಿಷ ಅವಧಿಯದ್ದಾಗಿದ್ದು, ವಿದ್ಯಾರ್ಥಿ ಕೊಠಡಿಯೊಳಗೇ ಇರುವಂತೆ ಸೂಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.