ADVERTISEMENT

ಔಷಧ ಕೊರತೆ ನೀಗಿಸಲು ಒತ್ತಾಯ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 15:50 IST
Last Updated 8 ಅಕ್ಟೋಬರ್ 2025, 15:50 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 75ರಷ್ಟು ಔಷಧಗಳು ಮಾತ್ರ ಸಿಗುತ್ತಿವೆ. ಉಳಿದ ಶೇ 25ರಷ್ಟು ಔಷಧಗಳನ್ನು ಹೊರಗಿನಿಂದ ಖರೀದಿಸಬೇಕಾಗಿದ್ದು, ಈ ಕೊರತೆಯನ್ನು ನೀಗಿಸಬೇಕು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯ ಕುರಿತು ದೂರುಗಳು ಬಂದ ಕಾರಣ ಬುಧವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಡವರು ಔಷಧದ ಅಂಗಡಿಗಳಿಗೆ ಹೋಗಿ ಖರೀದಿಸುವ ಶಕ್ತಿ ಹೊಂದಿರುವುದಿಲ್ಲ. ಸರ್ಕಾರ ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

‘ವೈದ್ಯಕೀಯ ಸಿಬ್ಬಂದಿ ಕೊರತೆ ಮತ್ತು ವೈದ್ಯರು ಸರಿಯಾಗಿ ತಪಾಸಣೆ ಮಾಡುವುದಿಲ್ಲ ಎಂಬ ದೂರುಗಳು ಬಂದಿದ್ದವು. ಹಿರಿಯ ವೈದ್ಯರು ಕೆಲವೊಮ್ಮೆ ಬೇರೆ ಬೇರೆ ಆಸ್ಪತ್ರೆಗೆ ಹೊರಟು ಹೋಗುತ್ತಾರೆ. ಇದನ್ನು ಸರ್ಕಾರ ತಡೆಯಬೇಕಿದೆ. ಹಿರಿಯ ಮತ್ತು ನುರಿತ ವೈದ್ಯರ ಉಪಸ್ಥಿತಿ ಅತ್ಯಗತ್ಯ. ಅವರನ್ನು ಹೊರಗೆ ಹೋಗಲು ಬಿಡಬಾರದು’ ಎಂದು ಅವರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.