ADVERTISEMENT

ಬಿ.ಕೆ.ಹರಿ‍ಪ್ರಸಾದ್‌ಗೆ ಆರ್‌ಎಸ್‌ಎಸ್‌ ಟೀಕೆಯ ಚಪಲ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 15:45 IST
Last Updated 31 ಜನವರಿ 2026, 15:45 IST
   

ಬೆಂಗಳೂರು: ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುವುದನ್ನೇ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿ‍ಪ್ರಸಾದ್ ಚಪಲ ಮಾಡಿಕೊಂಡಿದ್ದಾರೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ್ದ ರಾಜ್ಯಪಾಲರು ತೆರಳುವಾಗ ಕೆಲವರು ಧಿಕ್ಕಾರ ಕೂಗಿದ್ದಾರೆ. ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ಘಟನೆಗಳ ಮುಖ್ಯ ಕಾರಣಕರ್ತರು ಹರಿಪ್ರಸಾದ್. ರಾಜ್ಯಪಾಲರ ಜತೆಗೆ ಆರ್‌ಎಸ್‌ಎಸ್‌ ಅನ್ನೂ ಟೀಕಿಸಿದರು. ಚಡ್ಡಿ, ಪೋಕ್ಸೊ ಪದ ಬಳಸಿದ್ದಾರೆ. ರಾಜ್ಯಪಾಲರ ಬಗ್ಗೆ ಉದ್ಧಟತನದ ಮಾತನಾಡಿದ್ದಾರೆ. ಪ್ರಶ್ನಿಸಿದ ನನ್ನನ್ನೂ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ’ ಎಂದು ಟೀಕಿಸಿದರು.  

‘ವಿಬಿ–ಜಿ ರಾಮ್‌ ಜಿ’ಯಲ್ಲಿ ರಾಮನ ಹೆಸರು ಇರುವುದನ್ನೇ ಕಾಂಗ್ರೆಸ್‌ಗೆ ಸಹಿಸಲು‌ ಆಗಿಲ್ಲ. ಹಿಂದುತ್ವ, ರಾಮನನ್ನು ವಿರೋಧಿಸಬೇಕೆಂದೇ ವಿಶೇಷ ಅಧಿವೇಶನ ಕರೆದಿದ್ದಾರೆ. ಸದನ ಕರೆಯುವ ಅಗತ್ಯ ಇರಲಿಲ್ಲ. ಸದನದಲ್ಲಿ ಕಾಂಗ್ರೆಸ್‌ ಸದಸ್ಯರು ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ದಲಿತರ ಧ್ವನಿ ಅಡಗಿಸುವಲ್ಲೂ ಕಾಂಗ್ರೆಸ್ ಸಫಲವಾಗಿದೆ’ ಎಂದು ದೂರಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.