ಬೆಂಗಳೂರು: ಈ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಛಾಯಾ ಭಟ್ ಅವರ ಕತೆಗಳ ಹಸ್ತಪ್ರತಿ ಆಯ್ಕೆಯಾಗಿದೆ.
ಮೂಲತಃ ಕುಮಟಾ ತಾಲ್ಲೂಕಿನ ಹೊಲನಗದ್ದೆಯ ಛಾಯಾ ಭಟ್, ಪ್ರಸ್ತುತ ಬೆಂಗಳೂರಿನ ಶ್ರೀ ಕುಮರನ್ಸ್ ಶಾಲೆಯಲ್ಲಿ ಶಿಕ್ಷಕರು. ಈ ಬಾರಿ ಲೇಖಕಿ ಆರ್. ತಾರಿಣಿ ಶುಭದಾಯಿನಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ನೂರಕ್ಕೂಹೆಚ್ಚು ಹಸ್ತಪ್ರತಿಗಳು ಬಂದಿದ್ದವು. ಕತೆಗಾರರಿಗೆ ₹ 30 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡಲಾಗುತ್ತದೆ.ಬಹುಮಾನಿತ ಹಸ್ತಪ್ರತಿಯ ಪುಸ್ತಕವನ್ನು ಅಕ್ಟೋಬರ್ ತಿಂಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.