ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಸಂಶೋಧನೆಗೆ ಅನುದಾನ ಕಡಿತಗೊಳಿಸುವ ಮೂಲಕ ದ್ರೋಹ ಎಸಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಅನುದಾನ ಕಡಿತಗೊಳಿಸಿರುವ ವಿಚಾರವಾಗಿ ‘ಪ್ರಜಾವಾಣಿಯ ವಿಶೇಷ ವರದಿ’ಯನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಚಂದ್ರಯಾನದ ಯಶಸ್ಸಿನ ಶ್ರೇಯ ವಿಜ್ಞಾನಿಗಳಿಗೆ ಸಲ್ಲಬೇಕು, ಆದರೆ, ಯಶಸ್ಸಿನ ಕೀರ್ತಿಯನ್ನು ತನ್ನತ್ತ ಕೇಂದ್ರೀಕರಿಸಲು ರೋಡ್ ಶೋಕಿ ಮಾಡುವವರು ಬಾಹ್ಯಾಕಾಶ ಸಂಶೋಧನೆಗೆ ಅನುದಾನ ಕಡಿತಗೊಳಿಸಿ ದ್ರೋಹ ಎಸಗಿದ್ದಾರೆ.
‘ಬಜೆಟ್‌ನಲ್ಲಿ ಘೋಷಿಸಿದ ಅನುದಾನದಲ್ಲೇ ಕಡಿತ. ಘೋಷಣೆಯಾದ ಅನುದಾನ ಬಿಡುಗಡೆ ಮಾಡುವುದರಲ್ಲೂ ಇನ್ನಷ್ಟು ಕಡಿತ. ಇಷ್ಟೆಲ್ಲಾ ದ್ರೋಹವೆಸಗಿ ಖಾಲಿ ಕೈ ಬೀಸುವುದನ್ನು ಅವರ ಸಾಧನೆ ಎನ್ನಬೇಕೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಚಂದ್ರಯಾನ–3ರ ಯಶಸ್ಸಿಗೆ ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ರೋಡ್ ಶೋ ಕೂಡ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.