
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸಾರಿಗೆ ನಿಗಮಗಳ ವಾಹನಗಳು ಮತ್ತು ವಿವಿಧ ಇಲಾಖೆಗಳ ಚಾಲಕರಿಗೆ ನೀಡುವ ಮುಖ್ಯಮಂತ್ರಿ ಚಿನ್ನದ ಪದಕ, ಬೆಳ್ಳಿ ಪದಕ ಪುರಸ್ಕೃತರಿಗೆ ನೀಡುವ ನಗದು ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಲಾಗಿದೆ.
ಚಿನ್ನದ ಪದಕ ಪುರಸ್ಕೃತರಿಗೆ ₹5,000 ನೀಡುತ್ತಿದ್ದ ನಗದನ್ನು ₹10 ಸಾವಿರಕ್ಕೆ ಏರಿಸಲಾಗಿದೆ. ತಿಂಗಳ ಭತ್ಯೆ ₹ 500 ಅನ್ನು ₹1000ಕ್ಕೆ ಏರಿಸಲಾಗಿದೆ. ಬೆಳ್ಳಿ ಪದಕ ಪುರಸ್ಕೃತರಿಗೆ ನಗದು ಬಹುಮಾನವನ್ನು ₹ 2,500ರಿಂದ ₹ 5,000ಕ್ಕೆ ಏರಿಸಲಾಗಿದೆ. ತಿಂಗಳ ಭತ್ಯೆ ₹250 ಅನ್ನು ₹ 500ಕ್ಕೆ ಏರಿಸಲಾಗಿದೆ.
ಪರಿಷ್ಕೃತ ನಗದು ಪುರಸ್ಕಾರವು 2026ರ ಜನವರಿ 1ರಿಂದ ಜಾರಿಗೆ ಬರಲಿದೆ. ಈ ಹಿಂದೆ ಪುರಸ್ಕಾರ ಪಡೆದವರಿಗೂ 2026ರಿಂದ ಪರಿಷ್ಕೃತ ಭತ್ಯೆ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.