ADVERTISEMENT

ಚಿಕ್ಕಮಗಳೂರು: 16 ಮಂದಿ ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಕಾಫಿನಾಡು ಈಗ ಕೋವಿಡ್‌ ಮುಕ್ತ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 7:24 IST
Last Updated 6 ಜೂನ್ 2020, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಕೋವಿಡ್‌ನಿಂದ ಮತ್ತೆ ಇಬ್ಬರು ಗುಣುಮುಖರಾಗಿದ್ದು, ಶನಿವಾರ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿದ್ದ 16 ಮಂದಿಯೂ ಗುಣಮುಖರಾಗಿದ್ದಾರೆ.

ಪಿ–2765 (28 ವರ್ಷ) ಮತ್ತು ಪಿ–2766 (38ವರ್ಷ) ಅವರನ್ನು ಬಿಡುಗಡೆಗೊಳಿಸಲಾಗಿದೆ. ಇಬ್ಬರೂ ಪುರುಷರು. ಒಬ್ಬರು ಮಹಾರಾಷ್ಟ್ರದಿಂದ ಎನ್‌.ಆರ್‌.ಪುರ ತಾಲ್ಲೂಕಿಗೆ ಬಂದವರು, ಮತ್ತೊಬ್ಬರು ನವದೆಹಲಿಯಿಂದ ಶೃಂಗೇರಿ ತಾಲ್ಲೂಕಿನ ಬಂದವರು.
ಸೋಂಕು ಪತ್ತೆಯಾಗಿದ್ದವರೆಲ್ಲರೂ ಹೊರರಾಜ್ಯಗಳಿಂದ ಬಂದವರು. ಜಿಲ್ಲೆಯ ಯಾರಿಗೂ ಈವರೆಗೆ ದೃಢಪಟ್ಟಿಲ್ಲ. ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT