ADVERTISEMENT

ಚಿಕ್ಕಮಗಳೂರು: ನಕ್ಸಲರು ಹೊರ ಬಂದ ಕಾಡಿನಲ್ಲಿ ಶಸ್ತ್ರಾಸ್ತ್ರ ವಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 4:30 IST
Last Updated 11 ಜನವರಿ 2025, 4:30 IST
<div class="paragraphs"><p> ನಕ್ಸಲರ</p></div>

ನಕ್ಸಲರ

   

ಚಿಕ್ಕಮಗಳೂರು: ಆರು ನಕ್ಸಲರು ಮುಖ್ಯವಾಹಿನಿಗೆ ಬಂದ ಬೆನ್ನಲ್ಲೇ ಪೊಲೀಸರು ಅರಣ್ಯ ದಲ್ಲಿದ್ದ ಶಸ್ತ್ರಾಸ್ತ್ರಗಳನ್ನುವಶಪಡಿಸಿಕೊಂಡಿದ್ದಾರೆ.

ಕೊಪ್ಪ ತಾಲ್ಲೂಕಿನ ಜಯಪುರ ವ್ಯಾಪ್ತಿಯ ಕಿತ್ತಲೆಗುಳಿ ಬಳಿಯ ಅರಣ್ಯದಲ್ಲಿ ಆರು ಬಂದೂಕು ಹಾಗೂ ಮದ್ದು- ಗುಂಡು ದೊರೆತಿವೆ. ಒಂದು ಎ.ಕೆ-56, ಮೂರು 303 ರೈಫಲ್, ಹನ್ನೆರಡು ಬೋರ್ ಎಸ್‌ಬಿಬಿಎಲ್, ಒಂದು ಸ್ವದೇಶ ನಿರ್ಮಿತ ಬಂದೂಕು ಸಿಕ್ಕಿದೆ.

ADVERTISEMENT

7.62 ಎಂಎಂ ಎ.ಕೆ. ಮದ್ದುಗುಂಡು-11, 303 ರೈಫಲ್ ಮದ್ದುಗುಂಡು – 133, 12 ಬೋರ್ ಕಾರ್ಟ್ರಿಜ್‌–24, ಸ್ವದೇಶ ನಿರ್ಮಿತ ಪಿಸ್ತೂಲ್ ಮದ್ದುಗುಂಡು– 8 ಸೇರಿ ಒಟ್ಟು 176 ಮದ್ದುಗುಂಡು ಹಾಗೂ ಒಂದು ಎ.ಕೆ-56 ಖಾಲಿ ಮ್ಯಾಗಜಿನ್‌ ದೊರೆತಿದೆ. ಜಯಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.

ಬುಧವಾರ ಮುಖ್ಯವಾಹಿನಿಗೆ ಬಂದ‌ನಕ್ಸಲರು, ಅದೇ ಕಾಡಿನಿಂದ ಹೊರ ಬಂದಿದ್ದರು. ವಶಪಡಿಸಿಕೊಂಡಿರುವಕೆಲವು ಬಂದೂಕುಗಳಲ್ಲಿ ಮಾವೋವಾದಿ ಪಕ್ಷದ ಚಿಹ್ನೆ ಕೆತ್ತಲಾಗಿದೆ.‌ ಕೆಲವು ಬಂದೂಕುಗಳು ತುಕ್ಕು ಹಿಡಿದ ಸ್ಥಿತಿಯಲ್ಲಿವೆ. ‘ಕೆಲವು ಹಳೆಯ ಬಂದೂಕುಗಳು, ಕೆಲವು ಬಳಕೆಯಲ್ಲಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಇವು ಶರಣಾದ ನಕ್ಸಲರಿಗೆ ಸೇರಿದವುಗಳೇ ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. 

ನಕ್ಸಲರ ಶರಣಾಗತಿ ಕುರಿತು ‍ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ‘ನಕ್ಸಲರು ಎಲ್ಲಿ ಕಾರ್ಯಾ ಚರಣೆ ಮಾಡುತ್ತಿದ್ದರು, ಹಣ ಮತ್ತು ಬಂದೂಕುಗಳು ಎಲ್ಲಿಂದ ಬಂದವು, ಯಾವ ವ್ಯಕ್ತಿ ಹಾಗೂ ಸಂಘಟನೆಯಿಂದ ಸಹಾಯ ಸಿಗುತ್ತಿತ್ತು ಎಂಬ ಮಾಹಿತಿ ಹಂಚಿಕೊಂಡರೆ ಶರಣಾಗತಿಗೆ ಅರ್ಥ ಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.