ADVERTISEMENT

ಕೋಟೆ ಸಂರಕ್ಷಣೆಗೆ ಶರಣರ ನಡಿಗೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 18:56 IST
Last Updated 19 ಜೂನ್ 2019, 18:56 IST
ಚಿತ್ರದುರ್ಗದ ಏಳು ಸುತ್ತಿನ ಕೋಟೆಯಲ್ಲಿ ಕುಸಿದ ಅಗಳು ಗೋಡೆಯನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬುಧವಾರ ವೀಕ್ಷಿಸಿದರು
ಚಿತ್ರದುರ್ಗದ ಏಳು ಸುತ್ತಿನ ಕೋಟೆಯಲ್ಲಿ ಕುಸಿದ ಅಗಳು ಗೋಡೆಯನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬುಧವಾರ ವೀಕ್ಷಿಸಿದರು   

ಚಿತ್ರದುರ್ಗ: ಕುಸಿಯುತ್ತಿರುವ ಅಗಳು ಗೋಡೆಯನ್ನು ಪುನರುಜ್ಜೀವನಗೊಳಿಸಿ ಏಳು ಸುತ್ತಿನ ಕೋಟೆ ಸಂರಕ್ಷಿಸುವಂತೆ ಒತ್ತಾಯಿಸಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಸಾರ್ವಜನಿಕರು ಬುಧವಾರ ಜಾಥಾ ನಡೆಸಿದರು.

‘ನಮ್ಮ ನಡಿಗೆ ಕೋಟೆ ಸಂರಕ್ಷಣೆ ಕಡೆಗೆ’ ಎಂಬ ಘೋಷಣೆಯೊಂದಿಗೆ ಕೋಟೆಯಲ್ಲಿ ಒಂದೂವರೆ ಗಂಟೆ ಹೆಜ್ಜೆ ಹಾಕಿದರು. ಶಿಥಿಲಗೊಂಡ ಕೋಟೆಯ ಭಾಗಗಳನ್ನು ವೀಕ್ಷಿಸಿ, ದುರಸ್ತಿ ಮಾಡುವಂತೆ ಆಗ್ರಹಿಸಿದರು.

ಐತಿಹಾಸಿಕ ಕೋಟೆಯಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ಹೊರಹಾಕಿದರು. ನೀರು ಪೂರೈಕೆ, ಅನೈರ್ಮಲ್ಯದ ಬಗ್ಗೆಯೂ ಧ್ವನಿಯತ್ತಿದರು. ಬುರುಜು, ಬತ್ತೇರಿಗಳನ್ನು ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.

ADVERTISEMENT

‘ಐತಿಹಾಸಿಕ ಏಳು ಸುತ್ತಿನ ಕೋಟೆ ಶತಮಾನಗಳಿಂದ ಇರುವುದು ಚಿತ್ರದುರ್ಗದ ಹೆಗ್ಗಳಿಕೆ. ಶಿಥಿಲಾವಸ್ಥೆಯಲ್ಲಿರುವ ಕೋಟೆಯ ಜೀರ್ಣೊದ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಈಚೆಗೆ ಸುರಿದ ಮಳೆಗೆ ಕೋಟೆಯ ಅಗಳು ಗೋಡೆ ಕುಸಿದಿರುವ ಕುರಿತು ‘ಪ್ರಜಾವಾಣಿ’ ಈಚೆಗೆ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.