ADVERTISEMENT

ಚಿತ್ರದುರ್ಗ: ಅಹಮದಾಬಾದಿನಿಂದ ಮರಳಿದ 15 ಜನರಲ್ಲಿ ಮತ್ತೆ ಮೂವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 9 ಮೇ 2020, 8:18 IST
Last Updated 9 ಮೇ 2020, 8:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಗುಜರಾತ್ ರಾಜ್ಯದ ಅಹಮದಾಬಾದಿನಿಂದ ಮರಳಿದ 15 ಜನರಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ.

34, 26 ಹಾಗೂ 17 ವರ್ಷದ ಮೂವರಿಗೆ ಸೋಂಕು ತಗುಲಿದ್ದು, ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಶುಕ್ರವಾರ ಮೂವರಿಗೆ ಸೋಂಕು ತಗುಲಿತ್ತು. ಗಾನಾ ದೇಶದಿಂದ ಮರಳಿದ ಸೋಂಕಿತ ಮಹಿಳೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಊಟ ಕೊಟ್ಟವರು ನಾಪತ್ತೆ?:

ADVERTISEMENT

ಗುಜರಾತಿನ ಅಹಮದಾಬಾದ್ ನಿಂದ ಮೇ 5ರಂದು ಜಿಲ್ಲೆಗೆ ಮರಳಿದ 15 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇವರಲ್ಲಿ ನಾಲ್ವರು ಗುಜರಾತಿನಲ್ಲಿ ಇದ್ದಾಗಲೇ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದರು. ಕ್ವಾರಂಟೈನ್ ನಲ್ಲಿ ಇದ್ದ ಇವರಿಗೆ ಮನೆ ಊಟ ನೀಡಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು. ಹೀಗೆ ಮನೆ ಊಟ ನೀಡಿ ಸೋಂಕಿತರೊಂದಿಗೆ ಕಾಲ ಕಳೆದಿದ್ದವರನ್ನು ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆದರೆ, ಅವರು ಮನೆಯಿಂದ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.