
ತುಮಕೂರು: ‘ಬೆಳಗಾವಿಯ ಬಳಿಯ ಚೋರ್ಲಾ ಘಾಟ್ ಬಳಿ ನಡೆದ ₹400 ಕೋಟಿ ಮಹಾ ದರೋಡೆ ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿದೆ. ಈವರೆಗೆ ಸ್ವಲ್ಪ ಮಾಹಿತಿ ಸಿಕ್ಕಿದ್ದು ಅದರಲ್ಲೂ ತುಂಬಾ ಗೊಂದಲಗಳಿವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಸ್‌ಐಟಿ ವರದಿ ಸಲ್ಲಿಸುವ ತನಕ ಏನೂ ಹೇಳಲು ಆಗುವುದಿಲ್ಲ’ ಎಂದು ಹೇಳಿದರು.
‘ಇದುವರೆಗೆ ಬಂದ ಮಾಹಿತಿ ಪ್ರಕಾರ ಈ ಪ್ರಕರಣದಲ್ಲಿ ಪೊಲೀಸರು ಭಾಗಿಯಾಗಿದ್ದು ಕಂಡುಬಂದಿಲ್ಲ. ತನಿಖೆಯಲ್ಲಿ ಏನು ಬರುತ್ತದೆ ಎಂಬು
ವುದು ನೋಡಬೇಕು’ ಎಂ ದರು.
ದೂರು ಅಸ್ಪಷ್ಟ: ’₹400 ಕೋಟಿ ಲೂಟಿ ಮಾಡಲಾಗಿದೆ ಎಂಬ ದೂರು ಅಸ್ಪಷ್ಟವಾಗಿದೆ. ನಿರ್ದಿಷ್ಟ ಸ್ಥಳ ಉಲ್ಲೇಖಿಸದ ಕಾರಣ ವದಂತಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಘಾಟ್ ವಿಭಾಗವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಹರಡಿದೆ. ಮಹಾ
ರಾಷ್ಟ್ರ ಪೊಲೀಸರು ಮಾಹಿತಿ ಹಂಚಿಕೊಂಡರೆ, ನಮ್ಮ ಪೊಲೀಸರು ತನಿಖೆ ಮುಂದುವರಿಸುವರು’ ಎಂದರು.
ಬಿಜೆಪಿಯವರ ಸುಳ್ಳು: ‘ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಜನರ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಣ ಸಾಗಿಸುತ್ತಿದ್ದರೆನ್ನಲಾಗಿದೆ’ ಎಂದು ಸಚಿವ ಎನ್.ಎಸ್.ಬೋಸರಾಜು ಟೀಕಿಸಿದರು.
‘ಟ್ರಕ್ ಸಹಿತ ಹೈಜಾಕ್ ಆಗಿರುವ ₹ 400 ಕೋಟಿ ಕಾಂಗ್ರೆಸ್ಸಿನದ್ದು’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಅವರ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದರು.
ಮಡಿಕೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಾಹನ ಹೈಜಾಕ್ ಮಾಡಿದವರು, ದೂರು ನೀಡಿದ ಎಲ್ಲ ಮಹಾರಾಷ್ಟ್ರದವರೇ. ತನಿಖೆ ನಡೆಯುತ್ತಿದ್ದು ಕಾನೂನು ಕ್ರಮವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.