ADVERTISEMENT

ಸಿಗರೇಟ್‌ ಲಂಚ ಪ್ರಕರಣ| ಕಿತ್ತಾಟದಿಂದ ರಟ್ಟಾಯಿತು ಗುಟ್ಟು!

​ಪ್ರಜಾವಾಣಿ ವಾರ್ತೆ
Published 10 ಮೇ 2020, 17:16 IST
Last Updated 10 ಮೇ 2020, 17:16 IST
   

ಬೆಂಗಳೂರು: ಸಿಗರೇಟ್‌ ವಿತರಕರಿಂದ ಲಂಚ ಪಡೆದ ಗುಟ್ಟು ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳ ಮಧ್ಯೆ ಹಣದ ಹಂಚಿಕೆ ಕಿತ್ತಾಟದಿಂದ ರಟ್ಟಾಯಿತು. ಎಂ.ಡಿ.ಸನ್ಸ್‌, ಸಿಗರೇಟ್‌ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಪ್ರಭುಶಂಕರ್‌ಗೆ ₹ 62.5 ಲಕ್ಷ ನೀಡಿದ್ದು ಇನ್‌ಸ್ಪೆಕ್ಟರ್‌ಗಳಿಗೆ ಗೊತ್ತಾಯಿತು. ಆದರೂ ಅವರು ವಿತರಕರ ಗೋದಾಮಿನ ಮೇಲೆ ದಾಳಿ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

‘ದಾಳಿ ಬೇಡ ವಾಪಸ್‌ ಬನ್ನಿ’ ಎಂದು ಪ್ರಭುಶಂಕರ್‌ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದರೂ ಕೇಳಲಿಲ್ಲ. ಬಳಿಕ ವಿಷಯ ಸಿಸಿಬಿ ಡಿಸಿಪಿ ರವಿಕುಮಾರ್‌ ಗಮನಕ್ಕೆ ಬಂತು. ಗುರುವಾರದಿಂದ 4 ದಿನ ರಜೆಯಲ್ಲಿದ್ದ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆತಂಕಕ್ಕೊಳಗಾದ ಎಸಿಪಿ, ಡಿಸಿಪಿ ಕುಲದೀಪ್‌ ಜೈನ್‌ ಅವರನ್ನು ಸಂಪರ್ಕಿಸಿ ಪ್ರಕರಣದ ತನಿಖೆಯನ್ನು ತಮಗೇ ವಹಿಸುವಂತೆ ಟಿಪ್ಪಣಿ ಹಾಕಿಸಿ
ದರು. ಟಿಪ್ಪಣಿ ಜಂಟಿ ಕಮಿಷನರ್‌ ಸಂದೀಪ್‌ ಪಾಟೀಲ ಅವರರಿಗೂ ಹೋಯಿತು. ಅವರು ಅದನ್ನು ಪಕ್ಕಕ್ಕೆ ಇಟ್ಟರು ಎಂದೂ ಮೂಲಗಳು ಹೇಳಿವೆ.

ಸೋಮವಾರ ರವಿಕುಮಾರ್‌ ಹಿಂತಿರುಗಿದಾಗ ವಿಚಾರಣೆ ನಡೆಸಲು ಅವರಿಗೆ ಹೇಳಲಾಯಿತು. ಅವರು ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ವರದಿ ಕೊಟ್ಟರು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.