ADVERTISEMENT

ರೈತರ ಹಿತ ಕಾಯುವ ಭರವಸೆ ನೀಡಿದ ಸಿಎಂ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 14:43 IST
Last Updated 17 ನವೆಂಬರ್ 2018, 14:43 IST
   

ಬೆಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿ ಸೇರಿ ರಾಜ್ಯದಾದ್ಯಂತ ಲಕ್ಷಾಂತರ ಎಕರೆ ಭೂಮಿಯಲ್ಲಿ ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರನ್ನು ಅರಣ್ಯ ಇಲಾಖೆ ಖಾಲಿ ಮಾಡಿಸದಿರುವ ಕುರಿತು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಈ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಭೇಟಿ ನಂತರ ಹಿರಿಯ ಚಿತ್ರನಟಿ ಲೀಲಾದೇವಿ ಹಾಗೂ ಚಿತ್ರನಟ ವಿನೋದ್ ರಾಜ್ ಮಾಹಿತಿ ನೀಡಿದರು.

80-90 ವರ್ಷಗಳಿಂದ ರೈತರು ಉಳುತ್ತಿದ್ದಾರೆ. ಮಹಾರಾಜರ ಕಾಲದಿಂದಲೂ ಈ ಭೂಮಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲೆ ಇದೆ. ಅರಣ್ಯ ಇಲಾಖೆ 1907ಕ್ಕೆ ಹೊರಡಿಸಿದ ಅಧಿಸೂಚನೆ ಹೊರತುಪಡಿಸಿ ಬೇರೆ ಯಾವ ಆಧಾರವೂ ಅರಣ್ಯ ಇಲಾಖೆಗಿಲ್ಲ. ರೈತರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸ್ಪಂದಿಸಿದ್ದು, ಸೋಮವಾರ ಪುನಃ ಭೇಟಿಯಾಗುವಂತೆ ತಿಳಿಸಿದ್ದಾರೆ. ಅವರ ಮಾತಿನ ಧಾಟಿ ನೋಡಿದರೆ ಖಂಡಿತ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಲೀಲಾವತಿ ಹಾಗೂ ವಿನೋದ್ ರಾಜ್ ತಿಳಿಸಿದರು.

ADVERTISEMENT

ಡಿ. 6ಕ್ಕೆ ಎಲ್ಲ ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ‌ ಸಚಿವರ ಸಭೆ

ರಾಜ್ಯದ ಜಲ ವಿವಾದ, ವಿಚಾರದಲ್ಲಿ ಮುಂದಿನ ದಾರಿ ಕುರಿತು ಚರ್ಚಿಸಲು ಎಲ್ಲ ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ‌ ಸಚಿವರ ಸಭೆ ಡಿ. 6ಕ್ಕೆ ನಿಗದಿಪಡಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವಡಿ.ಕೆ.‌ಶಿವಕುಮಾರ್ ತಿಳಿಸಿದರು.

ಮಹದಾಯಿ ವಿಚಾರದಲ್ಲಿ ಕಾನೂನು ಹಾದಿ ಕುರಿತು ಚರ್ಚೆ ನಡೆಸಲು ಆಯೋಜಿಸಲಾಗಿದ್ದ ಸರ್ವಪಕ್ಷ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.