ADVERTISEMENT

ಎಲ್‌ಜಿ ಸಕ್ಸೇನಾ ಪರ ದೆಹಲಿ ಹೈಕೋರ್ಟ್ ಆದೇಶ ಒಪ್ಪಲಾಗದು : ಎಎಪಿ

ಪಿಟಿಐ
Published 27 ಸೆಪ್ಟೆಂಬರ್ 2022, 13:47 IST
Last Updated 27 ಸೆಪ್ಟೆಂಬರ್ 2022, 13:47 IST
   

ನವದೆಹಲಿ:ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ವಿರುದ್ಧ ಮತ್ತಷ್ಟು ಆರೋಪ ಮಾಡದಂತೆ ಮತ್ತು ಮಾನಹಾನಿಕರ ಹೇಳಿಕೆ, ವಿಡಿಯೊ ಹಾಗೂ ಟ್ವೀಟ್‌ಗಳನ್ನು ಹಂಚಿಕೊಳ್ಳದಂತೆ ದೆಹಲಿ ಹೈಕೋರ್ಟ್‌ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಸಂಪೂರ್ಣ ಒಪ್ಪಲಾಗದು ಎಂದು ಎಎ‍ಪಿ ಮಂಗಳವಾರ ಹೇಳಿದೆ.

ದೆಹಲಿ ಹೈಕೋರ್ಟ್‌ ತೀರ್ಪಿಗೆಎಎಪಿ ಹಿರಿಯ ನಾಯಕ ದುರ್ಗೇಶ್‌ ಪಾಠಕ್‌, ‘ಈ ಆದೇಶವನ್ನುನಾವು ಸಂಪೂರ್ಣ ಒಪ್ಪುವುದಿಲ್ಲ. ಇದನ್ನು ವಿನಮ್ರವಾಗಿಯೇ ಹೇಳುತ್ತಿದ್ದೇವೆ. ವಕೀಲರೊಂದಿಗೆ ಸಮಾಲೋಚಿಸಿ, ನ್ಯಾಯಾಲಯದ ಈ ಆದೇಶವನ್ನು ಅಧ್ಯಯನ ಮಾಡಲಾಗುವುದು. ಇದರಲ್ಲಿ ಮುಂದಿನ ಹೆಜ್ಜೆಯ ಬಗ್ಗೆಯೂ ನಿರ್ಧರಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT