ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಶೋಕ ಗೀತೆಯನ್ನು ಕೇಳುವವರು ಯಾರು ಎಂದು ರಾಜ್ಯ ಬಿಜೆಪಿ ಘಟಕವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಆ'ಶೋಕ' ಗೀತೆ ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬರೆದುಕೊಂಡಿದೆ.
‘ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕರೇ ಅಭಿನಂದಿಸಲು ಒಪ್ಪಲಿಲ್ಲ. ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ. ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್. ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ. ಸಭಾತ್ಯಾಗ ಮಾಡಿರುವುದಕ್ಕೆ ಸ್ವಪಕ್ಷದ ಶಾಸಕರಿಂದಲೇ ತರಾಟೆ. ಬಕೆಟ್ ರಾಜಕಾರಿಣಿ ಎಂದು ಬಿಜೆಪಿಗರಿಂದಲೇ ಬಿರುದು. ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಸ್ವಪಕ್ಷದ ನಾಯಕರಿಂದಲೇ ಸದನದಲ್ಲಿ ಮಾತನಾಡಲು ಅಡ್ಡಿ’ ಎಂದು ಕಾಂಗ್ರೆಸ್ ಬರೆದುಕೊಂಡಿದೆ.
ಅಲ್ಲದೆ, ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿರುವಾಗ ಅಶೋಕರ ಶೋಕ ರಾಗವನ್ನು ಕೇಳುವವರು ಯಾರು ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.