ADVERTISEMENT

‘ಗೌರವ ಡಾಕ್ಟರೇಟ್‌ಗೆ ಬೇಕು ಕಡಿವಾಣ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:11 IST
Last Updated 27 ಜನವರಿ 2026, 16:11 IST
ರಮೇಶ್‌ ಬಾಬು
ರಮೇಶ್‌ ಬಾಬು   

ಬೆಂಗಳೂರು: ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್‌ ಪದವಿಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ರಮೇಶ್‌ ಬಾಬು ಒತ್ತಾಯಿಸಿದರು.

ಮಂಗಳವಾರದ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಈ ಮೊದಲು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಲಾಗುತ್ತಿತ್ತು. ಈಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳು ಸಿಕ್ಕಸಿಕ್ಕವರಿಗೆಲ್ಲಾ ಈ ಪದವಿ ನೀಡುತ್ತಿವೆ. ಕೆಲವು ವಿಶ್ವವಿದ್ಯಾಲಯಗಳು ಹಣ ಪಡೆದು ನೀಡುತ್ತಿವೆ. ಇದರಿಂದ ಈ ಪದವಿಯ ಘನತೆ ಕುಗ್ಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಗೌರವ ಡಾಕ್ಟರೇಟ್‌ ನೀಡಲು ಒಂದು ಮಾನದಂಡ ರೂಪಿಸಬೇಕು. ವಿಶ್ವವಿದ್ಯಾಲಯವು ವರ್ಷವೊಂದರಲ್ಲಿ ನೀಡಬಹುದಾದ ಗೌರವ ಡಾಕ್ಟರೇಟ್‌ ಪದವಿಗಳಿಗೆ ಮಿತಿ ಹೇರಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.