ADVERTISEMENT

ತೆಲಂಗಾಣ ಆಪರೇಷನ್‌ ಕಮಲಕ್ಕೆ ಕರ್ನಾಟಕ ಕಾಂಗ್ರೆಸ್‌ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2022, 10:17 IST
Last Updated 27 ಅಕ್ಟೋಬರ್ 2022, 10:17 IST
   

ಬೆಂಗಳೂರು: ತೆಲಂಗಾಣದಲ್ಲಿ ಬಿಜೆಪಿ ಆಪರೇಷನ್‌ ಕಮಲಕ್ಕೆ ಮುಂದಾಗಿರುವುದನ್ನು ಕರ್ನಾಟಕ ಕಾಂಗ್ರೆಸ್‌ ಘಟಕ ಟೀಕಿಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಐಟಿ, ಇಡಿಗಳಿಗೆ ಬಿಜೆಪಿಯವರ ಮನೆಗೆ ನುಗ್ಗಲು ಭಯವೇ ಎಂದು ಪ್ರಶ್ನಿಸಿದೆ.

ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಂದವರಲ್ಲಿ ₹15 ಕೋಟಿ ಹಣ ದೊರಕಿದೆ, ಅದಲ್ಲದೆ ನೂರಿನ್ನೂರು ಕೋಟಿಗೂ ಅಧಿಕ ಮೊತ್ತದ ವ್ಯವಹಾರ ಅದಾಗಿದೆ.

ಐಟಿ, ಇಡಿಗಳು ಇದುವರೆಗೂ ಆ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲವೇಕೆ? ಆ ಅಕ್ರಮ ಹಣದ ಮೂಲ ಹುಡುಕುವ ಮನಸಿಲ್ಲವೇ? ಐಟಿ, ಇಡಿಗಳಿಗೆ ಬಿಜೆಪಿಯವರ ಮನೆಗೆ ನುಗ್ಗಲು ಭಯವೇ? ಎಂದು ಕಾಂಗ್ರೆಸ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

ADVERTISEMENT

ಟಿಆರ್‌ಎಸ್ ಶಾಸಕರನ್ನು ಪಕ್ಷ ಬಿಡುವಂತೆ ಆಮಿಷವೊಡ್ಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿರುವುದಾಗಿ ತೆಲಂಗಾಣ ಪೊಲೀಸರು ಬುಧವಾರ ಹೇಳಿದ್ದಾರೆ. ಇದು ಬಿಜೆಪಿಯದ್ದೇ ಕೃತ್ಯ ಎಂದು ಟಿಆರ್‌ಎಸ್‌ ಆರೋಪಿಸಿತ್ತು. ಟಿಆರ್‌ಎಸ್‌ ಆಪರೇಷನ್‌ ಕಮಲದ ಕಥೆ ಕಟ್ಟುತ್ತಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.