ADVERTISEMENT

ಕಾಂಗ್ರೆಸ್ ಪಕ್ಷ ವಿಳಾಸ ಇಲ್ಲದೆ ಹೋಗಿದೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 8:37 IST
Last Updated 20 ಫೆಬ್ರುವರಿ 2021, 8:37 IST
   

ಗಂಗಾವತಿ : ಧಾಮಿ೯ಕ ಭಾವನೆಗಳಿಗೆ ದಕ್ಕೆ ತರುವಂತ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ವಿಳಾಸವಿಲ್ಲದಂತೆ ಹೋಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.

ತಾಲೂಕಿನ ಅಂಜನಾದ್ರಿ ಪವ೯ತಕ್ಕೆ ಶನಿವಾರ ಬೇಟಿ ನೀಡಿದ ವೇಳೆ ಮಾತನಾಡಿದರು. ಅಯೋದ್ಯೆಯಲ್ಲಿ ಕೋಟ್೯ ತೀಪು೯ ನೀಡಿದಂತೆ ಭವ್ಯವಾಗಿ ರಾಮ ಮಂದಿರ ನಿಮಾ೯ಣ ಮಾಡಲಾಗುತ್ತಿದೆ. ಅದಕ್ಕೆ ರಾಷ್ಟ್ರದ ಜನತೆಯಿಂದ ಯಾವುದೇ ಒತ್ತಾಯವಿಲ್ಲದೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಅದಕ್ಕೆ ಜೆಡಿಎಸ್, ಕಾಂಗ್ರೆಸ್ ಪಕ್ಷದವರು ವಿರೋಧ ಮಾಡುವ ಮೂಲಕ ಧಾಮಿ೯ಕ ಭಾವನೆಗಳಿಗೆ ದಕ್ಕೆ ತರುತ್ತಿದ್ದಾರೆ. ಅವರ ನಡುವಳಿಕೆಯಿಂದ ಅವರು ಸದ್ಯ ಈ ಮಟ್ಟಕ್ಕೆ ಬಂದಿದ್ದಾರೆ. ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಇಲ್ಲದಂತ ಸನ್ನಿವೇಶ ನಿಮಾ೯ಣ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೂ ಬಸವ ಕಲ್ಯಾಣ, ಮಸ್ಕಿ, ಬೆಳಗಾವಿ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನರೇಂದ್ರ ಮೋದಿಯವರ ಭವ್ಯ ಭಾರತ ನಿಮಾ೯ಣ ಕನಸು ನಮ್ಮೆಲ್ಲರು ನನಸು ಮಾಡೋಣ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಆಪರೇಷನ್ ಆಡಿಯೋ ವಿಚಾರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಅದಕ್ಕೆ ನಮ್ಮ ವಕೀಲರ ಇದ್ದಾರೆ. ಇನ್ನೂ ಅಧಿಕಾರ ವಿಚಾರವಾಗಿ ಯಾರು ತಿಮಾ೯ನ ತೆಗೆದುಕೊಳ್ಳವಾಗಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಜನರ ಮನಸ್ಸು ಗೆಲ್ಲುವರನ್ನ ನೋಡಿ, ಪಕ್ಷಕ್ಕೆ ದುಡಿಯುವವರನ್ನು ನೋಡಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ರಾಷ್ಟ್ರೀಯ ನಾಯಕರಂತೆ ನಾವೆಲ್ಲರೂ ನಡೆಯುತ್ತೆವೆ. ಇನ್ನೂ ಮೀಸಲಾತಿ ವಿಚಾರವಾಗಿ ಈಗಾಗಲೇ ಹೇಳಿದಂತೆ ಸಂವಿಧಾನದ ಅಡಿಯಲ್ಲಿ ಇರೋ ಅವಕಾಶವನ್ನು ಬಳಸಿಕೊಂಡು ಪ್ರಮಾಣಿಕ ಕೆಲಸ ಮಾಡ್ತೀವಿ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.