ADVERTISEMENT

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಚಿವರ ಮೇಲೆ ಹಿಡಿತವಿಲ್ಲ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2022, 6:59 IST
Last Updated 19 ಜುಲೈ 2022, 6:59 IST
   

ಬೆಂಗಳೂರು: ಸಚಿವ ಸಂಪುಟದಲ್ಲಿ ಹಿರಿಯ ಸಚಿವರು ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳಬಾರದು. ಅವರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದರು. ಇದನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೇಣುಕಾಚಾರ್ಯ,‘ನಮ್ಮ ಸರ್ಕಾರದ ಸಚಿವರು ವಿಧಾನಸೌಧದ ಮೂರನೇ ಮಹಡಿಗೆ ಮಾತ್ರ ಸೀಮಿತವಾಗಬಾರದು. ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ. ಇನ್ನಾದರೂ ಅವರು ವಿಧಾನಸೌಧ ಬಿಟ್ಟು ಹೊರಬಂದು ಜನರ ಕೆಲಸ ಮಾಡಬೇಕು’ ಎಂದು ಚಾಟಿ ಬೀಸಿದ್ದರು.

ಈ ಹೇಳಿಕೆಯನ್ನು ಉಲ್ಲೇಖಿಸಿ#BJPvsBJP ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌,ಸಚಿವರು ಕೆಲಸವನ್ನೇ ಮಾಡುತ್ತಿಲ್ಲ. ವ್ಯಾಪಾರಸೌಧದ 3ನೇ ಮಹಡಿಗೆ ಸೀಮಿತರಾಗಿದ್ದಾರೆ.ತಮ್ಮ ಕ್ಷೇತ್ರ ಬಿಟ್ಟು ಮಂತ್ರಿಗಿರಿಯ ಜವಾಬ್ದಾರಿ ನಿರ್ವಹಿಸುತ್ತಿಲ್ಲ.ಸಚಿವರು ರಾಜೀನಾಮೆ ಕೊಡಬೇಕು ಎಂದುಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಅವರ ಮಾತುಗಳನ್ನುಒಪ್ಪುವಿರಾ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ,ಬಿಜೆಪಿಗೆ ಉತ್ಸವ ಮಾಡುವ ಉತ್ಸಾಹವಿಲ್ಲ, ಮಾಡುವುದಾದರೆ 'ಕಲಹೋತ್ಸವ' ಮಾಡಬಹುದು, ಆ ಮಟ್ಟಿಗಿದೆ ಬಿಜೆಪಿಯ ಕಲಹ!ಮಂತ್ರಿಗಳು ಕೆಲಸಮಾಡುತ್ತಿಲ್ಲ ಎಂದು ಸ್ವತಃ ಬಿಜೆಪಿಯ ರೇಣುಕಾಚಾರ್ಯ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ.ಮಂತ್ರಿಗಳ ಮೇಲೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹಿಡಿತವಿಲ್ಲದಿರುವುದೇ ಈ ನಿಷ್ಕ್ರೀಯತೆಗೆ ಕಾರಣವಲ್ಲವೇ ಎಂದು ಮತ್ತೊಂದು ಪ್ರಶ್ನೆ ಎಸೆದಿದೆ. ಈ ಟ್ವೀಟ್‌ನಲ್ಲಿ #ಬೊಂಬೆಬೊಮ್ಮಾಯಿ ಟ್ಯಾಗ್‌ ಬಳಸಿ ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.