ADVERTISEMENT

ಗರ್ಭಧಾರಣೆ ತಡೆ ಕಾಪರ್‌–ಟಿ ಬೇಡದವರಿಗೆ ಚುಚ್ಚುಮದ್ದು!

ಆರೋಗ್ಯ ಇಲಾಖೆಯ ಹೊಸ ಯೋಜನೆ

ಮಾನಸ ಬಿ.ಆರ್‌
Published 20 ಜುಲೈ 2018, 18:18 IST
Last Updated 20 ಜುಲೈ 2018, 18:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗರ್ಭಧಾರಣೆ ತಡೆಗೆ ಕಾಪರ್‌–ಟಿ ಹಾಗೂ ಮಾತ್ರೆ ಬಳಸಲು ಮನಸ್ಸು ಮಾಡದ ಮಹಿಳೆಯರಿಗಾಗಿ ಆರೋಗ್ಯ ಇಲಾಖೆ ‘ಗರ್ಭನಿರೋಧಕ ಚುಚ್ಚುಮದ್ದು’ ಯೋಜನೆ ಆರಂಭಿಸಿದೆ. ಒಂದೇ ವರ್ಷದಲ್ಲಿ 10,172 ಮಂದಿ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ.

ಮೊದಲ ಮಗುವಿನ ನಂತರ ಎರಡನೇ ಮಗು ಪಡೆಯುವ ಮುನ್ನ ಕನಿಷ್ಠ ಮೂರು ವರ್ಷಗಳ ಅಂತರ ಇರಬೇಕು ಎನ್ನುವ ಕಾರಣದಿಂದ ಆರೋಗ್ಯ ಇಲಾಖೆ ಈ ಯೋಜನೆ ಆರಂಭಿಸಿದೆ. ಗರ್ಭತಡೆಗೆ ವರ್ಷದಲ್ಲಿ ನಾಲ್ಕು ಡೋಸ್‌ಗಳಲ್ಲಿ ಈ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ದಾವಣಗೆರೆಯಲ್ಲಿ 2017–18ರಲ್ಲಿ ಒಂದು ವರ್ಷದ ಅವಧಿಗೆ 878 ಜನರು ಈ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಹಾವೇರಿಯಲ್ಲಿ 48 ಮಂದಿ ಮಾತ್ರ ಆಸಕ್ತಿತೋರಿದ್ದಾರೆ.

‘ಗರ್ಭತಡೆಗೆ ಸಾಕಷ್ಟು ವಿಧಾನಗಳು ಇವೆ. ಚುಚ್ಚುಮದ್ದು ಪಡೆಯುವುದು ಸಹ ಅವುಗಳಲ್ಲಿ ಒಂದು. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚುಚ್ಚುಮದ್ದು ಹಾಕಿಸಿಕೊಳ್ಳಬಹುದು. ಯೋಜನೆ ಆರಂಭವಾದ ಒಂದು ವರ್ಷದಲ್ಲಿಯೇ ಇಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ’ ಎಂದು ಆರೋಗ್ಯ ಇಲಾ ಖೆಯ ಮಹಿಳೆಯರ ಕಲ್ಯಾಣ ವಿಭಾಗದ ಮುಖ್ಯಸ್ಥ ಡಾ. ರಾಜ್‌ಕುಮಾರ್‌ ಹೇಳಿದರು.

ADVERTISEMENT

‘ಕಾಪರ್‌–ಟಿ, ಗರ್ಭನಿರೋಧಕ ಮಾತ್ರೆ ಸೇರಿದಂತೆ ಬೇರೆ ಬೇರೆ ವಿಧಾನಗಳ ಬಗ್ಗೆ ಅಂಜಿಕೆ ಇರುವವರು ಈ ವಿಧಾನವನ್ನು ಸುಲಭವಾಗಿ ಅನುಸರಿಸಬಹುದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.