ADVERTISEMENT

ಎಸ್ಸೆಸ್ಸೆಲ್ಸಿ, 7ನೇ ತರಗತಿ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 13:38 IST
Last Updated 12 ಮಾರ್ಚ್ 2020, 13:38 IST
ಶಿಕ್ಷಣ ಸಚಿವ ಬಿ.ಸುರೇಶ್‌ ಕುಮಾರ್
ಶಿಕ್ಷಣ ಸಚಿವ ಬಿ.ಸುರೇಶ್‌ ಕುಮಾರ್   

ಬೆಂಗಳೂರು:ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು 7ನೇ ತರಗತಿ ಮೌಲ್ಯಾಂಕನ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಆದರೆ ಶುಕ್ರವಾರದಿಂದಲೇ ಎಲ್ಲಾಶಾಲೆಗಳು ಪರೀಕ್ಷಾ ಸಿದ್ಧತೆ ರಜೆ ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ 1ರಿಂದ 6ನೇ ತರಗತಿವರೆಗೆ ನಾಳೆಯಿಂದಲೇ ಬೇಸಿಗೆ ರಜೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಜೆ ಮುಗಿದ ಬಳಿಕ ಮಕ್ಕಳಿಗೆ ಪರೀಕ್ಷೆ ನಡೆಸುವುದಿಲ್ಲ.ಎಫ್ಎ _1,2,3,4, ಎಸ್ಎ 1 ಆಧಾರದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದರು.

ADVERTISEMENT

7ರಿಂದ 10ನೇ ತರಗತಿವರೆಗೆ ಶುಕ್ರವಾರದಿಂದಲೇ ಅಭ್ಯಾಸ ರಜೆ ನೀಡಬೇಕು.9ನೇ ತರಗತಿವರೆಗೆ 23ರೊಳಗೆ ಪರೀಕ್ಷೆ ಕೊನೆಗೊಳಿಸಿ ಬೇಸಿಗೆ ರಜೆ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.