
ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಶಿಫಾರಸು ಮಾಡಲಿ ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಗತ್ಯವಿದ್ದರೆ ನನ್ನ ಅವಧಿಯದ್ದೂ ಸೇರಿಸಿ ತನಿಖೆ ಮಾಡಿಸಲಿ’ ಎಂದು ಹೇಳಿದರು.
‘ಖಾದರ್ ಅವರ ಆಡಳಿತ ಸುಧಾರಣೆಯ ಭಾಗವಾಗಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆ ನಡೆದಿದೆ. ಆದ್ದರಿಂದ, ನ್ಯಾಯಾಂಗ ತನಿಖೆ ನಡೆಸುವುದು ಸೂಕ್ತ. ಸಭಾಧ್ಯಕ್ಷರ ಹುದ್ದೆ ಸಾಂವಿಧಾನಿಕ ಹುದ್ದೆ. ಅದಕ್ಕೆ ಘನತೆ– ಗೌರವ ಇದೆ. ಆರೋಪ ಬಂದಾಗ ತನಿಖೆಗೆ ಆದೇಶಿಸಬೇಕು, ಆರೋಪಗಳಿಂದ ಕಳಂಕ ಮುಕ್ತರಾಗಿ ಹೊರಬರಬೇಕು’ ಎಂದು ಕಾಗೇರಿ ಹೇಳಿದರು.
‘ಕಾಗೇರಿ ಅವರು ಮಾಡಿರುವ ಆರೋಪ ಮಾಜಿ ಸಭಾಧ್ಯಕ್ಷರಿಗೆ ಮಾಡಿರುವ ಅಪಮಾನ’ ಎಂದು ಖಾದರ್ ಅವರು ನೀಡಿದ ಹೇಳಿಕೆ ಪ್ರತಿಕ್ರಿಯಿಸಿದ ಕಾಗೇರಿ, ‘ಅಭಿಪ್ರಾಯ ಹೇಳುವುದಕ್ಕೆ ನಮಗೆ ಸ್ವಾತಂತ್ರ್ಯವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.