ADVERTISEMENT

ಕೋವಿಡ್‌ನಿಂದ ದಂಪತಿ ಸಾವು: ಹುಟ್ಟಿದ ನಾಲ್ಕು ದಿನಕ್ಕೇ ಅನಾಥವಾದ ಮಗು

​ಪ್ರಜಾವಾಣಿ ವಾರ್ತೆ
Published 15 ಮೇ 2021, 19:45 IST
Last Updated 15 ಮೇ 2021, 19:45 IST
ಕೋವಿಡ್‌ನಿಂದ ಮೃತಪಟ್ಟ ನಂಜುಂಡೇಗೌಡ ಮತ್ತು ಮಮತಾ ದಂಪತಿ
ಕೋವಿಡ್‌ನಿಂದ ಮೃತಪಟ್ಟ ನಂಜುಂಡೇಗೌಡ ಮತ್ತು ಮಮತಾ ದಂಪತಿ   

ನಾಗಮಂಗಲ: ತಾಲ್ಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಂಜುಂಡೇಗೌಡ ಮತ್ತು ಮಮತಾ ದಂಪತಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, ಅವರ ಹೆಣ್ಣು ಶಿಶು ಹುಟ್ಟಿದ ನಾಲ್ಕು ದಿನಕ್ಕೇ ಅನಾಥವಾಗಿದೆ.

ದಂಪತಿ, ಕೆಲ ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನೆಲೆಸಿದ್ದರು. ನಂಜುಂಡೇಗೌಡ ಅವರಿಗೆ ಏಪ್ರಿಲ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನಲ್ಲಿ ಏ.30ರಂದು ಮೃತಪಟ್ಟಿದ್ದರು.

ಗರ್ಭಿಣಿಯಾಗಿದ್ದ ಮಮತಾ ಅವರಿಗೂ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಐಸೊಲೇಷನ್‌ಗೆ ಒಳಗಾಗಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ಜಿಲ್ಲೆಯ ಮಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಮೇ 11ರಂದು ಹೆಣ್ಣು‌ ಮಗುವಿಗೆ ಜನ್ಮ ನೀಡಿದ್ದ ಮಮತಾ, ಮೇ 14 ರಂದು ಅಸುನೀಗಿದ್ದಾರೆ.

ADVERTISEMENT

ದಂಪತಿಗೆ, 9 ವರ್ಷಗಳ ನಂತರ ಮಗು ಹುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.