ADVERTISEMENT

Covid–19 Karnataka Updates: 306 ಪ್ರಕರಣಗಳು ದೃಢ, 2 ಸಾವು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:11 IST
Last Updated 25 ನವೆಂಬರ್ 2021, 16:11 IST
   

ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ 306 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 2 ಸಾವು ಸಂಭವಿಸಿವೆ. 224 ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 29,94,561ಕ್ಕೆ ಏರಿದ್ದು, 29,49,853 ಮಂದಿ ಚೇತರಿಸಿಕೊಂಡಿದ್ದರೆ. ರಾಜ್ಯದಲ್ಲಿ ಈವರೆಗೆ 38,187 ಮಂದಿ ಕೋವಿಡ್‌ನಿಂದ ಅಸುನೀಗಿದ್ದಾರೆ.

ರಾಜ್ಯದಲ್ಲಿ ಸದ್ಯ 6,492 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಕೋವಿಡ್ ದೃಢ ಪ್ರಮಾಣ ಶೇಕಡ 0.36ರಷ್ಟಿದ್ದು, ಮರಣ ಪ್ರಮಾಣ ಶೇಕಡ 0.65ರಷ್ಟಿದೆ.

ADVERTISEMENT

ಬೆಂಗಳೂರು ನಗರದಲ್ಲಿ 171 ಪ್ರಕರಣಗಳು ದೃಢಪಟ್ಟಿವೆ. ಧಾರವಾಡದಲ್ಲಿ 42, ಮೈಸೂರಿನಲ್ಲಿ 20 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.